ಧಾರವಾಡ ಕ್ಷೇತ್ರದಲ್ಲಿ 18,31,975 ಮತದಾರು

web
Published on

ಧಾರವಾಡ: ಪ್ರಸಕ್ತ ಲೋಕಸಭೆ ಚುನಾವಣೆಗೆ ಮತದಾರರ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡಿದೆ. ೨೦೨೪ರ ಮೇ ೧೯ರವರೆಗೆ ಕ್ಷೇತ್ರದಲ್ಲಿ ೯,೧೭,೯೨೬ ಪುರುಷರು, ೯,೧೩,೯೪೯ ಮಹಿಳೆಯರು, ೧೦೦ ತೃತೀಯ ಲಿಂಗಿಗಳು ಸೇರಿ ೧೮,೩೧,೯೭೫ ಮತದಾರರು ನೋಂದಾಯಿಸಿಕೊAಡಿದ್ದಾರೆ.
೪೭,೨೦೪ ಜನ ಹೊಸದಾಗಿ ನೋಂದಾಯಿತ ಯುವ ಮತದಾರರು, ೨೫,೭೮೭ ವಿಕಲಚೇತನರು ಹಾಗೂ ೮೫ ವರ್ಷ ಮೇಲ್ಪಟ್ಟ ೧೮,೬೨೬ ಹಿರಿಯ ನಾಗರಿಕರು ಪಟ್ಟಿಯಲ್ಲಿದ್ದಾರೆ.
ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ೧,೦೭,೩೦೧ ಪುರುಷರು, ೧,೦೫,೭೬೭ ಮಹಿಳೆಯರು, ೯ ತೃತೀಯಲಿಂಗಿ ಸೇರಿ ೨,೧೩,೦೭೭ ಮತದಾರರಿದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ ೯೭,೭೨೦ ಪುರುಷರು, ೯೩,೬೮೧ ಮಹಿಳೆಯರು, ೮ ತೃತೀಯಲಿಂಗಿ ಸೇರಿ ೧,೯೧,೪೦೯ ಮತದಾರರಿದ್ದಾರೆ. ಧಾರವಾಡ ಕ್ಷೇತ್ರದಲ್ಲಿ ೧,೧೨,೩೬೨ ಪುರುಷರು, ೧,೧೨,೪೫೪ ಮಹಿಳೆಯರು, ೧೦ ತೃತೀಯಲಿಂಗಿ ಸೇರಿ ೨,೨೪೮೨೬ ಮತದಾರರಿದ್ದಾರೆ. ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದಲ್ಲಿ ೧,೦೯,೯೧೩ ಪುರುಷರು, ೧,೧೨,೨೯೭ ಮಹಿಳೆಯರು, ೧೭ ತೃತೀಯಲಿಂಗಿ ಸೇರಿ ೨,೨೨,೨೨೭ ಮತದಾರರಿದ್ದಾರೆ. ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ೧,೩೧,೭೬೩ ಪುರುಷರು, ೧,೩೫,೪೫೧ ಮಹಿಳೆಯರು ಮತ್ತು ೩೭ ತೃತೀಯಲಿಂಗಿಗಳು ಸೇರಿ ೨,೬೭,೨೫೧ ಮತದಾರರಿದ್ದಾರೆ. ಹು- ಧಾ ಪಶ್ಚಿಮ ಕ್ಷೇತ್ರದಲ್ಲಿ ೧,೩೭,೦೩೭ ಪುರುಷರು, ೧,೪೩,೦೩೦ ಮಹಿಳೆಯರು ಮತ್ತು ೬ ತೃತೀಯಲಿಂಗಿಗಳು ಸೇರಿ ೨,೮೦,೦೭೩ ಮತದಾರರಿದ್ದಾರೆ. ಕಲಘಟಗಿ ಕ್ಷೇತ್ರದಲ್ಲಿ ೧,೦೨,೪೫೭ ಪುರುಷರು, ೯೭,೪೮೪ ಮಹಿಳೆಯರು ಮತ್ತು ೬ ತೃತೀಯಲಿಂಗಿಗಳು ಸೇರಿ ೧,೯೯,೯೭೪ ಮತದಾರರಿದ್ದಾರೆ. ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ೧,೧೯,೩೭೩ ಪುರುಷರು, ೧,೧೩,೭೮೫ ಮಹಿಳೆಯರು ಮತ್ತು ೭ ತೃತೀಯಲಿಂಗಿಗಳು ಸೇರಿ ೨,೩೩,೧೬೫ ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಽಕಾರಿ ದಿವ್ಯ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net