18 ವರ್ಷದ ಬಾಲಕಿ 8 ತಿಂಗಳ ಗರ್ಭಿಣಿ: ವಿಚಾರಣೆ ವೇಳೆ ಪೊಲೀಸರನ್ನೆ ಯಾಮಾರಿಸಿದ್ದ ಚಾಲಾಕಿ |victim

Pregnent
Published on

victim : 18 ವರ್ಷದ ಬಾಲಕಿಯೊಬ್ಬಳು 8 ತಿಂಗಳು ಗರ್ಭಿಣಿಯಾಗಿದ್ದು, ತನ್ನ ಗೆಳೆಯನನ್ನು ಪೋಕ್ಸೊ ಕಾಯ್ದೆಯಿಂದ ರಕ್ಷಿಸುವ ಸಲುವಾಗಿ, ಇಬ್ಬರು ಅಪರಿಚಿತ ವ್ಯಕ್ತಿಗಳು ಚಾಕು ತೋರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ನಕಲಿ ಕಥೆಯನ್ನು ಸೃಷ್ಟಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪ್ರಾಥಮಿಕ ವರದಿ ಪ್ರಕಾರ, ಸೋಮವಾರ (ಸೆಪ್ಟೆಂಬರ್​ 29)ಬಾಲಕಿ ಮಗುವಿಗೆ ಜನ್ಮ ನೀಡುವ ಸಲುವಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆ ವೇಳೆ ಆಕೆಗೆ ಇನ್ನು 18 ವರ್ಷ ಎಂದು ತಿಳಿದ ಸಿಬ್ಬಂದಿ, ದೈಹಿಕ ಸಂಬಂಧದ ಸಮಯದಲ್ಲಿ ಬಾಲಕಿ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಪೊಲೀಸರಿಗೆ ದಾರಿ ತಪ್ಪಿಸಿದ ಬಾಲಕಿ

ಈ ವಿಚಾರದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಬಾಲಕಿಯು ಸ್ನೇಹಿತರೊಂದಿಗೆ ಮಾಥೇರಾನ್​ಗೆ ಪ್ರವಾಸಕ್ಕೆ ಹೋಗಿದ್ದ ಸಮಯದಲ್ಲಿ ಲಾಡ್ಜ್​ನಲ್ಲಿ ಉಳಿದುಕೊಂಡಾಗ ಅಪರಿಚಿತ ಇಬ್ಬರು ವ್ಯಕ್ತಿಗಳು ಚಾಕು ತೋರಿಸಿ ಬಲವಂತವಾಗಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದು, ಈ ಪ್ರಕರಣವನ್ನು ರಾಯಗಡದ ಮಾಥೇರಾನ್ ಪೊಲೀಸರಿಗೆ ವರ್ಗಾಯಿಸಿದ್ದಾರೆ.

ಪೊಲೀಸರು ಬಾಲಕಿಯ ಜೊತೆಗಿದ್ದ ಇಬ್ಬರು ಸ್ನೇಹಿತೆಯರನ್ನು ವಿಚಾರಣೆ ನಡೆಸಿದ್ದು, ನಾವು ಜುಲೈನಲ್ಲಿ ಮಾಥೇರಾನ್​ಗೆ ಹೋಗಿದ್ದೆವು ಆದರೆ, ನಮ್ಮೊಂದಿಗೆ ಬಾಲಕಿ ಇರಲಿಲ್ಲ ಎಂದು ತಿಳಿಸಿದ್ದಾರೆ.

ಇದಾದ ನಂತರ ಪೊಲೀಸರು ಮತ್ತೆ ಬಾಲಕಿಯನ್ನು ವಿಚಾರಣೆ ನಡೆಸಿದಾಗ, ಸಂದರ್ಭದಲ್ಲಿ ಈ ಮೊದಲು ನೀಡಿದ ಹೇಳಿಕೆಗಳು ಸುಳ್ಳು ಎಂದು ಒಪ್ಪಿಕೊಂಡಿದ್ದು, ತಾನು ಗರ್ಭಧರಿಸಲು ನನ್ನ ಗೆಳೆಯನೇ (17) ಕಾರಣ. ನಾನು ನಮ್ಮ ಮಾವನ ಮನೆಯಲ್ಲಿ ಇದ್ದಂತಹ ಸಂದರ್ಭದಲ್ಲಿ ನನ್ನ ಗೆಳೆಯ ಪದೇ ಪದೇ ನನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದನು ಎಂದು ಹೇಳಿದ್ದಾಳೆ.

ಈ ಎಲ್ಲಾ ನಿಜಾಂಶವನ್ನು ಹೊರತೆಗೆದ ಪೊಲೀಸರು ವಡಾಲಾ ಟಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ನಡೆದಿರುವುದನ್ನು ದೃಢಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ಟಿಟಿ ಪೊಲೀಸರಿಗೆ ವರ್ಗಾಹಿಸಿದ್ದಾರೆ. ಇನ್ನು ಆಕೆಯ ಸ್ನೇಹಿತ (17) ವಿರುದ್ಧ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net