

ಬೆಂಗಳೂರು: ಶ್ರೀ ಬಸವ ವಿದ್ಯಾಭಿವೃದ್ಧಿ ಸಂಘವು ಪ್ರತಿವರ್ಷ ಪ್ರೊ.ಟಿ.ಆರ್.ಮಹದೇವಯ್ಯನವರ ಹೆಸರಿನಲ್ಲಿ ಕೊಡಮಾಡುವ 17ನೇ ಸಾತ್ವಿಕ ಪ್ರಶಸ್ತಿಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರು ಹಾಗೂ ಕನ್ನಡ ಸಾಹಿತ್ಯ-ಸಂಸ್ಕೃತಿಯ ಸಂಶೋಧಕರಾದ ಡಾ. ನಾಗಭೂಷಣ ಅವರು ಆಯ್ಕೆಯಾಗಿದ್ದಾರೆ.
ಜು.14 ರಂದು ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿರುವ ಶ್ರೀಈಶ್ವರ ಸೇವಾ ಮಂಡಳಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡುವುದಾಗಿ ಸಂಘವು ತಿಳಿಸಿದೆ. ಸಮಾರಂಭದ ಸಾನ್ನಿಧ್ಯವನ್ನು ತುಮಕೂರು ಹಿರೇಮಠದ ಡಾ.ಶ್ರೀ ಶಿವಾನಂದ ಶಿವಚಾರ್ಯ ಸ್ವಾಮಿಗಳು ವಹಿಸಲಿದ್ದು, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಗಣ್ಯರಿಗೆ ಗುರು ರಕ್ಷೆ ನೀಡಿ ಗೌರವಿಸಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ಶಿವಕುಮಾರ್ ತಿಳಿಸಿದ್ದಾರೆ.