

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 17 ಡಿವೈಎಸ್ಪಿಗಳಿಗೆ ನಾನ್ ಐಪಿಎಸ್ ದರ್ಜೆಗೆ ಬಡ್ತಿ ನೀಡಿದ ಸರ್ಕಾರ, ವರ್ಗಾವಣೆ ಮಾಡಿದೆ.
ವಿ.ಮರಿಯಪ್ಪ, ವಾಲಿ ಬಾಷಾ, ಎಂ.ವೇಣುಗೋಪಾಲ್, ಸಿ. ಮಲ್ಲಿಕ್, ಪುಟ್ಟಮಾದಯ್ಯ, ಸತೀಶ್ ಎಸ್. ಚಿಟಗುಬ್ಬಿ, ಕೆ.ಎಸ್.ಸುಂದರ್ರಾಜ್ ಅವರಿಗೆ ಎಸ್ಪಿಯಾಗಿ ಬಡ್ತಿ ನೀಡಿ ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆ ಮಾಡಿದೆ. ಅದೇ ರೀತಿ ಬಿ.ಎಂ. ನಾರಾಯಣಸ್ವಾಮಿ- ಹೆಚ್ಚುವರಿ ಎಸ್ಪಿ (ಕೋಲಾರ), ಎಂ.ವಿಜಯಕುಮಾರ್- ಹೆಚ್ಚುವರಿ ಎಸ್ಪಿ (ಹಾವೇರಿ), ಎಚ್.ಮಂಜುನಾಥ್ ಬಾಬು- ಎಸ್ಪಿ ಡಿಸಿಆರ್ಇ, ಎಸ್.ವಾಸುದೇವರಾಮ- ಎಸ್ಪಿ ಎಟಿ ಘಟಕ(ರಾಜ್ಯ ಗುಪ್ತದಳ), ಪಿ.ಎ. ಪುರುಷೋತ್ತಮ-ಎಸ್ಪಿ ಲೋಕಾಯುಕ್ತ, ವಿ.ಬಿ.ಭಾಸ್ಕರ್- ಎಸ್ಪಿ ಐಎಸ್ಡಿ, ಎಂ.ಎಲ್. ಪುರುಷೋತ್ತಮ- ಎಸ್ಪಿ (ಲೋಕಾಯುಕ್ತ), ಎಚ್.ಪ್ರವಿಣ್ ನಾಯಕ್ - ಎಸ್ಪಿ (ರಾಜ್ಯ ಗುಪ್ತದಳ), ಅನಿಲ್ ಕುಮಾರ್ ಎಸ್. ಭೂಮರೆಡ್ಡಿ- ಎಸ್ಪಿ, ಡಿಸಿಅರ್ಇಗೆ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.