

ಮೇಷ: ಬಹುದಿನಗಳ ಕೊರಗಿಗೆ ಮುಕ್ತಿ, ಮನಸ್ಸಿಗೆ ನೆಮ್ಮದಿ. ವೈದ್ಯ ವೃತ್ತಿಯವರಿಗೆ ವಿಶೇಷ ಲಾಭ. ವ್ಯಾಸಂಗದಲ್ಲಿ ಹಿನ್ನಡೆಯಾಗುವುದು. ಶುಭಸಂಖ್ಯೆ:5
ವೃಷಭ: ಉದ್ಯೋಗಸ್ಥ ಮಹಿಳೆಯರಿಗೆ ಲಾಭವಿದೆ. ಪರರ ಮಾತಿಗೆ ಕಿವಿ ಕೊಡಬೇಡಿ. ಗೆಳೆಯರಿಂದ ನಿರೀಕ್ಷಿತ ಸಹಾಯ. ಸಾಲಬಾಧೆೆ. ಶುಭಸಂಖ್ಯೆ: 8
ಮಿಥುನ: ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸುವುದು ಅಪೇಕ್ಷಣೀಯ. ವಿವಾಹ ಯೋಗವಿದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಶುಭಸಂಖ್ಯೆ:1
ಕಟಕ: ಯತ್ನ ಕಾರ್ಯಗಳಲ್ಲಿ ನಿರೀಕ್ಷಿತ ಜಯ ದೊರೆಯುವುದು. ಆಕಸ್ಮಿಕ ಖರ್ಚು ಮಾಡಬೇಕಾಗುವುದು. ದಾಯಾದಿ ಕಲಹ ಸಾಧ್ಯತೆ. ಶುಭಸಂಖ್ಯೆ: 8
ಸಿಂಹ: ಸ್ಥಗಿತ ಕಾರ್ಯಗಳಲ್ಲಿ ಉತ್ತಮ ಮುನ್ನಡೆ ಸಾಧಿಸುವಿರಿ. ಮನಃಶಾಂತಿ ಸಿಗಲಿದೆ. ಎಷ್ಟೇ ಹಣ ಬಂದರೂ ಕೈಯಲ್ಲಿ ಉಳಿಯುವುದಿಲ್ಲ. ಶುಭಸಂಖ್ಯೆ: 1
ಕನ್ಯಾ: ಸಕಾಲದಲ್ಲಿ ಹಣ ಒದಗಿಬರುವುದು. ವ್ಯಾಪಾರದಲ್ಲಿ ಉತ್ತಮ ವಹಿವಾಟು. ಸಮಸ್ಯೆಗಳನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ. ಶುಭಸಂಖ್ಯೆ: 3
ತುಲಾ: ನಿರೀಕ್ಷಿತ ಯಶಸ್ಸು ಪ್ರಾಪ್ತಿ. ಅಮೂಲ್ಯ ವಸ್ತು ಕಳೆದುಕೊಳ್ಳುವಿರಿ. ಇತರರ ಭಾವನೆಗೆ ಸ್ಪಂದಿಸುವಿರಿ. ಸ್ತ್ರೀಯರು ತಾಳ್ಮೆಯಿಂದಿರಿ. ಶುಭಸಂಖ್ಯೆ: 1
ವೃಶ್ಚಿಕ: ಪೀಠೋಪಕರಣ ವ್ಯಾಪಾರಿಗಳಿಗೆ ಲಾಭ. ಚಿನ್ನಾಭರಣ ಪ್ರಾಪ್ತಿ. ಉದ್ಯೋಗದಲ್ಲಿ ಕಿರಿಕಿರಿ. ಚಂಚಲ ಮನಸ್ಸು, ಹಿತಶತ್ರು ಕಾಟ. ಶುಭಸಂಖ್ಯೆ: 4
ಧನುಸ್ಸು: ಕಲಾವಿದರಿಗೆ, ನಟನಾವೃತ್ತಿಯವರಿಗೆ ವಿಶೇಷ ದಿನ. ಮಿತ್ರರಿಂದ ಸಹಾಯ ಒದಗುವುದು. ಕಾರ್ಯಸಾಧನೆ. ಅಧಿಕಾರ-ಪ್ರಾಪ್ತಿ. ಶುಭಸಂಖ್ಯೆ: 8
ಮಕರ: ಹಲವು ವರ್ಷಗಳಿಂದ ನಿರೀಕ್ಷಿಸುತ್ತಿದ ಕೆಲಸದಲ್ಲಿ ಜಯ. ಅಲ್ಪ ಆದಾಯ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ಮನಃಶಾಂತಿ ಸಿಗುವುದು. ಶುಭಸಂಖ್ಯೆ: 6
ಕುಂಭ: ಆತ್ಮೀಯರಿಂದ ಸಹಾಯ ದೊರೆತು ಹಳೆಯ ಸಮಸ್ಯೆ ಬಗೆಹರಿಯುವುದು. ಸ್ಥಿರಾಸ್ತಿ ಖರೀದಿಸುವ ಸಾಧ್ಯತೆ. ಪ್ರಿಯ ಜನರ ಭೇಟಿ. ಶುಭಸಂಖ್ಯೆ: 3
ಮೀನ: ಮಾನಸಿಕ ಒತ್ತಡ ಅನುಭವಿಸುವುದು ಅನಿವಾರ್ಯ. ಎಲ್ಲರ ಪ್ರೀತಿ ವಿಶ್ವಾಸಗಳಿಸುವಿರಿ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ: 6