

ಕೋಲಾರ: ಕಳೆದ 4-5 ತಿಂಗಳಿಂದ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚುವರಿ ಮಳೆಯಾಗಿದ್ದು, ಇದುವರೆಗೂ ಒಟ್ಟು 1,502 ಹೆಕ್ಟೇರ್ನಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಹಾನಿಯಾಗಿವೆ.
2025ನೇ ಸಾಲಿನ ಜನವರಿ ಯಿಂದ ಮೇ ವರೆಗೆ ವಾಡಿಕೆಯಾಗಿ ಜಿಲ್ಲೆಯಾದ್ಯಂತ 88.5 ಎಂಎಂ ನಷ್ಟು ಮಳೆಯಾಗಬೇಕಿತ್ತು, ಆದರೆ, ನಿರೀೆ ಮೀರಿ ಈಗಾಗಲೇ 186 ಎಂಎಂ ಹೆಚ್ಚುವರಿ ಮಳೆಯಾಗಿದೆ. ಕೆಜಿಎ್ ತಾಲೂಕಿನಲ್ಲಿ ಅತಿ ಮಳೆಯಿಂದಾಗಿ 1 ಜಾನುವಾರು ಮೃತಪಟ್ಟಿದ್ದು, ಎನ್ಡಿಆರ್ಎ್ ಮತ್ತು ಎಸ್ಡಿಆರ್ಎ್ ಮಾರ್ಗಸೂಚಿಯಂತೆ 37,500 ರೂ. ಪರಿಹಾರವನ್ನು ತಾಲೂಕು ಆಡಳಿತದಿಂದ ಮಾಲೀಕರಿಗೆ ನೀಡಲಾಗಿದೆ. ಬೆಳೆ ಸಮೀೆ ಕುರಿತು ಕಂದಾಯ, ತೋಟಗಾರಿಕೆ ಅಧಿಕಾರಿಗಳ ಸಮೀೆ ನಡೆಯುತ್ತಿದ್ದು, ಅತಿ ಹೆಚ್ಚು ತೋಟಗಾರಿಕೆ ಬೆಳೆಗಳು ಕೆಜಿಎ್, ಬಂಗಾರಪೇಟೆ, ಮುಳಬಾಗಿಲು ತಾಲೂಕು ವ್ಯಾಪ್ತಿಗಳಲ್ಲಿ ಹಾನಿಯಾಗಿದೆ.
ತೋಟಗಾರಿಕೆ ಬೆಳೆಗಳಾದ ಟೊಮ್ಯಾಟೊ, ಮಾವು, ಪಪ್ಪಾಯ, ಕ್ಯಾಪ್ಸಿಕಂ, ಕೋಸು, ಹೂವು ಹೀಗೆ ಹಲವು ಬೆಳೆಗಳು ನೆಲಕಚ್ಚಿವೆ.
ರಾತ್ರಿ ಮಳೆಯಾಗಿ, ಹಗಲಿನಲ್ಲಿ ಮೋಡ ಕವಿದ ವಾತಾವರಣ ಇದ್ದ ಕಾರಣ ಟೊಮ್ಯಾಟೊ, ಪಪ್ಪಾಯ, ಕ್ಯಾಪ್ಸಿಕಂ, ಹೂವು ಬೆಳೆಗಳಲ್ಲಿ ಹೆಚ್ಚಾಗಿ ರೋಗಗಳು ಕಾಣಿಸಿಕೊಳ್ಳುತ್ತಿವೆ. ಹೆಚ್ಚು ಮಳೆಯಾದ ಕಾರಣ ತೋಟಗಳಲ್ಲಿ ಮಳೆ ನೀರು ನಿಂತು ಬೆಳೆಗಳು ನೆಲಕ್ಕುರುಳಿವೆ. ಕೊಯ್ಲಿಗೆ ಬಂದಿದ್ದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
* ಮಾರ್ಗಸೂಚಿ ಪ್ರಕಾರ ಪರಿಹಾರ
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬೆಳೆ ಹಾನಿ ಕುರಿತು ಆಯಾ ತಾಲೂಕುಗಳಿಂದ ವರದಿ ತರಿಸಿಕೊಂಡು ರೈತರಿಗೆ ಎಸ್ಎಇಆರ್ಎ್ ಹಾಗೂ ಎನ್ಡಿಆರ್ಎ್ ಮಾರ್ಗಸೂಚಿ ಪ್ರಕಾರ ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ. ಕೆಜಿಎ್ ತಾಲೂಕಿನಲ್ಲಿ ಒಂದು ಎಮ್ಮೆ ಮೃತಟ್ಟಿದ್ದು, ಪರಿಹಾರ ನೀಡಲಾಗಿದೆ. ಶ್ರೀನಿವಾಸಪುರ ತಾಲೂಕಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದಾಗ ಮಳೆಯಿಂದ ಯಾವುದೇ ರೀತಿ ಹಾನಿ ಸಂಭವಿಸಿಲ್ಲ. ಮಳೆಯು ಮಾವು ಬೆಳೆಗೆ ಅಗತ್ಯವಿದ್ದು, ಮಾವಿನ ಕಾಯಿ ಗಟ್ಟಿಯಾಗುವುದರ ಜತೆಗೆ, ರುಚಿ ಹೆಚ್ಚಿಸಿಕೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು. ಮಳೆಯಿಂದ ದೊಡ್ಡ ಹಾನಿಯೇನು ಸಂಭವಿಸಿಲ್ಲ, ತೋಟಗಾರಿಕೆ ಬೆಳೆಗಳು 1,500 ಹೆಕ್ಟೇರ್ ಪ್ರದೇಶದಲ್ಲಿ ಮಾವು, ಟೊಮ್ಯಾಟೊ ಹೀಗೆ ಹಲವು ಬೆಳೆಗಳು ಹಾಗಿಯಾಗಿವೆ. ವಿಶೇಷವಾಗಿ ಶ್ರೀನಿವಾಸಪುರ, ಕೆಜಿಎ್ನಲ್ಲಿ ಹೆಚ್ಚು ಪ್ರಮಾಣದಲ್ಲಿ ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ.