

ವೈಜಾಗ್: ಆಘಾತಕಾರಿ ಘಟನೆ ಒಂದರಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಸ್ವಯಂಘೋಷಿತ ದೇವಮಾನವನೊಬ್ಬ ಕಳೆದ ಎರಡು ವರ್ಷಗಳಿಂದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದ ವೈಜಾಗ್ನಲ್ಲಿ ನಡೆದಿದೆ.
ವೆಂಕೋಜಿಪಾಲೆಂನಲ್ಲಿರುವ ಜ್ಞಾನಾನಂದ ಆಶ್ರಮದಲ್ಲಿ ಸ್ವಾಮಿ ಪೂರ್ಣಾನಂದ(63) ತನ್ನ ಕೈ-ಕಾಲುಗಳನ್ನು ಸರಪಳಿಯಲ್ಲಿ ಕಟ್ಟಿಹಾಕಿ ದೌರ್ಜನ್ಯ ಎಸಗುತ್ತಿದ್ದರು ಎಂದು ಅಪ್ರಾಪ್ತ ವಯಸ್ಕೆ ತನ್ನ ದೂರಿನಲ್ಲಿ ಆರೋಪಿಸಿದ್ಧಾಳೆ. ಪ್ರಕರಣ ಸಂಬಂಧ ಆರೋಪಿ ಸ್ವಾಮೀಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜಮಂಡ್ರಿ ಮೂಲದ ಸಂತ್ರಸ್ತೆ ಅತಿ ಚಿಕ್ಕವಯಸ್ಸಿನಲ್ಲಿಯೇ ತನ್ನ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿದ್ದಳು. ಬಾಲಕಿಯ ಸಂಬಂಧಿಕರು ಆಕೆಯನ್ನು ಜ್ಞಾನಾನಂದ ಆಶ್ರಮಕ್ಕೆ ಸೇರಿಸಿದ್ಧಾರೆ. ಆಶ್ರಮದಲ್ಲಿ ಬಡವರು ಹಾಗು ವಯಸ್ಸಾದವರನ್ನು ಉಚಿತವಾಗಿ ನೋಡಿಕೊಳ್ಳಲಾಗುತ್ತಿತ್ತು ಎಂದು ಹೇಳಲಾಗಿದೆ.
ಸ್ವಾಮಿ ಪೂರ್ಣಾನಂದ ಪ್ರತಿನಿತ್ಯ ಬಾಲಕಿಯನ್ನು ತನ್ನ ಕೋಣೆಯೊಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗುತ್ತಿದ್ದ. ಕಳೆದ ಒಂದು ವರ್ಷದಿಂದ ಆಕೆಯ ಕೈ-ಕಾಲುಗಳನ್ನು ಕಟ್ಟಿ ಹಾಕಿ ಕೋಣೆಯೊಳಗೆ ಕೂಡಿ ಹಾಕಲಾಗಿತ್ತು. ಆಕೆಗೆ ಪ್ರತಿನಿತ್ಯ ಎರಡು ಸ್ಪೂನ್ ಆಹಾರ ವಾರಕ್ಕೊಮ್ಮೆ ಸ್ನಾನ ಮಾಡಲು ಅನುಮತಿಸಿದ್ದರು ಎಂದು ಸಂತ್ರಸ್ತ ಬಾಲಕಿ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.
ಜೂನ್ 13ರಂದು ಬಾಲಕಿ ಆಶ್ರಮದಿಂದ ತಪ್ಪಿಸಿಕೊಂಡಿದ್ದು, ರೈಲಿನಲ್ಲಿ ಪ್ರಯಾಣಿಸುವ ವೇಳೆ ಸಂತ್ರಸ್ತೆ ತನ್ನಗಾದ ಬಗ್ಗೆ ಮಹಿಳೆಯೊಬ್ಬರ ಬಳಿ ಹೇಳಿಕೊಂಡಿದ್ಧಾಳೆ. ಬಳಿಕ ಆಕೆಯನ್ನು ಕೃಷ್ಣ ಜಿಲ್ಲೆ ಕಂಕಿಪಾಡು ಪ್ರದೇಶದಲ್ಲಿರುವ ಹಾಸ್ಟೆಲ್ ಒಂದಕ್ಕೆ ಸೇರಿಸಲು ಮುಂದಾದಾಗ ಅಲ್ಲಿನ ಸಿಬ್ಬಂದಿ ಪೊಲೀಸರಿಂದ ನಿರಾಕ್ಷೇಪಣಾ ಪತರವನ್ನು ತರುವಂತೆ ಸೂಚಿಸಿದ್ಧಾರೆ.
ಪೊಲೀಸರಿಂದ ಪತ್ರ ಪಡೆದ ಬಳಿಕ ಮಹಿಳೆ ಸಂತ್ರಸ್ತೆಯನ್ನು ಮಕ್ಕಳ ಕಲ್ಯಾಣ ಸಮಿತಿ(CWC)ಗೆ ಕರೆದುಕೊಂಡು ಹೋಗಿದ್ದು, ಆಕೆ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಸದಸ್ಯರ ಬಳಿ ಹೇಳಿಕೊಂಡಿದ್ದಾಳೆ. ತಕ್ಷಣ ಎಚ್ಚೆತ್ತ ಸದಸ್ಯರ ಬಾಲಕಿಯನ್ನು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಸ್ವಾಮೀಜಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಾಲಕಿಯನ್ನು ವಿಜಯವಾಡ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಸ್ವಾಮಿ ಪೂರ್ಣಾನಂದ ವಿರುದ್ಧ 2012ರಲ್ಲೂ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಸ್ವಾಮಿ ಪೂರ್ಣಾನಂದ ವಿರುದ್ಧ ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಭಕ್ತರೊಬ್ಬರು ಪ್ರತಿಕ್ರಿಯಿಸಿದ್ದು, ಕೆಲವು ಪ್ರಭಾವಿ ವ್ಯಕ್ತಿಗಳು ಆಶ್ರಮದ ಜಾಗವನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ಅದರ ಭಾಗವಾಗಿ ಸ್ವಾಮೀಜಿ ಅವರ ಮೇಲೆ ಈ ರೀತಿಯ ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ಹೇಳಿದ್ದಾರೆ.