

ಬೆಂಗಳೂರು: ರಾಜ್ಯದಲ್ಲಿ ನಡೆದ ಲೋಸಭೆ ಚುನಾವಣೆಯಲ್ಲಿ ಅಂತಿಮವಾಗಿ ಶೇ. 69.56 ರಷ್ಟು ಮತದಾನವಾಗಿದೆ. ಉಡುಪಿ-ಚಿಕ್ಕಮಗಳೂರು-77.15, ಹಾಸನ-77.68, ದಕ್ಷಿಣ ಕನ್ನಡ-77.56, ಚಿತ್ರದುರ್ಗ-73.30, ತುಮಕೂರು-78.05, ಮಂಡ್ಯ-81.67, ಮೈಸೂರು-70.62, ಚಾಮರಾಜನಗರ-76.81, ಬೆಂಗಳೂರು ಗ್ರಾಮಾಂತರ-68.30, ಬೆಂಗಳೂರು ಉತ್ತರ-54.45, ಬೆಂಗಳೂರು ಕೇಂದ್ರ-54.06, ಬೆಂಗಳೂರು ದಕ್ಷಿಣ-53.17, ಚಿಕ್ಕಬಳ್ಳಾಪುರ-77.00 ಮತ್ತು ಕೋಲಾರದಲ್ಲಿ 78.27 ರಷ್ಟು ಮತದಾನವಾಗಿದೆ.