

ಬೆಂಗಳೂರು: ಕರೊನಾ ವೈರಸ್ ನಿಯಂತ್ರಣಕ್ಕಾಗಿ ಮೇ 10 ರಿಂದ ಮೇ 24 ರವೆರೆಗೆ ಕರ್ನಾಟಕವನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಘೋಷಿಸಿದ್ದಾರೆ.
ಬರುವ ಸೋಮವಾರದಿಂದ 14 ದಿನ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ಡೌನ್ ಇರಲಿದೆ. ಅಲ್ಲದೇ ಈ ಬಗ್ಗೆ ಮುಖ್ಯಕಾರ್ಯದರ್ಶಿ ಅವರು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.
1 ಸೋಮವಾರ ಬೆಳಿಗ್ಗೆ 6 ರಿಂದ ಮೇ 24 ರವರೆಗೆ ಕರ್ನಾಟಕದಾದ್ಯಂತ ಲಾಕ್ಡೌನ್ ಇರಲಿದೆ
2 ಈಗಾಗಲೇ ನಿಗದಿಪಡಿಸಿರುವ ರೈಲು ಹಾಗೂ ವಿಮಾನ ಸೇವೆ ಲಭ್ಯವಿರಲಿದೆ. ಅಗತ್ಯ ದಾಖಲೆಗಳನ್ನು ತೋರಿಸಿ ಪ್ರಯಾಣಿಸಬಹುದು
3 ಮೆಟ್ರೋ ರೈಲು ಸೇವೆಗೆ ನಿರ್ಬಂಧ
4 ಆಟೋ, ಕ್ಯಾಬ್ಗೆ ತುರ್ತು ಬಳಕೆಗೆ ಮಾತ್ರ ಅವಕಾಶ
5 ಶಾಲೆ, ಕಾಲೇಜು, ತರಬೇತಿ ಶಾಲೆಗಳು ಮುಚ್ಚಿರಲಾಗುತ್ತದೆ. ಆನ್ಲೈನ್ ಕ್ಲಾಸ್ಗೆ ಅವಕಾಶ
6 ಹೋಟೆಲ್, ರೆಸ್ಟೊರಂಟ್ಗಳು ಬಂದ್ ಇರುತ್ತವೆ. ಆದರೆ ಪಾರ್ಸಲ್ಗೆ ಅವಕಾಶ ಇರುತ್ತದೆ
7 ಮಾಲ್, ಚಿತ್ರಮಂದಿರಗಳು, ಪಾರ್ಕ್, ಬಾರ್, ಪಬ್, ಮನರಂಜನಾ ಪಾರ್ಕ್ಗಳು ಮುಚ್ಚಬೇಕಾಗುತ್ತದೆ.
8 ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅವಕಾಶ ಇಲ್ಲ
9 ಈಗಾಗಲೇ ನಿಗದಿಯಾಗಿರುವ ಮದುವೆಗಳಿಗೆ ಅವಕಾಶ. ಕೇವಲ 50 ಮಂದಿಗೆ ಮಾತ್ರ ಅವಕಾಶ, ಅಂತ್ಯಕ್ರಿಯೆಗೆ 5 ಜನಕ್ಕೆ ಅವಕಾಶ
10 ಪೊಲೀಸ್, ಹೋಮ್ಗಾರ್ಡ್, ಅಗ್ನಿಶಾಮಕ, ಬಂಧಿಖಾನೆ, ಪ್ರಾಕೃತಿಕ ವಿಕೋಪ ದಳ ಸೇರಿದಂತೆ ತುರ್ತು ಸೇವೆಗಳಿಗೆ ಅವಕಾಶ ಹಾಗೂ ವಿದ್ಯುತ್, ನೀರು, ಆರೋಗ್ಯ ಸೇವೆಗಳಿಗೆ ಅವಕಾಶ
11 ಗೂಡ್ಸ್ ವಾಗನಗಳನ್ನು ಬಿಟ್ಟು ಬೇರೆ ವಾಹನಗಳಿಗೆ ಅವಕಾಶ ಇಲ್ಲ. ಜನ ವಾಹನಗಳನ್ನು ತೆಗೆದುಕೊಂಡು ಆಹಾರ ಪಾರ್ಸಲ್ ತರುವ ಹಾಗಿಲ್ಲ. ಹತ್ತಿರದ ಸ್ಥಳಕ್ಕೆ ನಡೆದುಕೊಂಡು ಹೋಗಿ ತರಬೇಕು
12 ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಕೆಲಸ ನಿರ್ವಹಿಸುತ್ತವೆ
13 ಜಿಲ್ಲೆಯಿಂದ ಜಿಲ್ಲೆಗೆ ಓಡಾಟ ಇರುವುದಿಲ್ಲ
14 ಇ ಕಾಮರ್ಸ್ ಮುಖಾಂತರ ಪಾರ್ಸಲ್ ತರುವುದಕ್ಕೆ ಅವಕಾಶ
15 ಕೈಗಾರಿಕೆ, ಕಟ್ಟಡ ನಿರ್ಮಾಣ ಚಟುವಟಿಕೆಗೆ ಹೊರಗಿನಿಂದ ಜನ ಕರೆದುಕೊಂಡು ಬರುವ ಹಾಗಿಲ್ಲ, ಅಲ್ಲಿಯೇ ಇರುವ ಸಿಬ್ಬಂದಿಯೊಡನೆ ಕೆಲಸ ಮಾಡಿಸಬೇಕು. ಗಾರ್ಮೆಂಟ್ ಸೆಕ್ಟರ್ಗೂ ಇದು ಅನ್ವಯವಾಗುತ್ತದೆ
16 ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ
17 ಲಸಿಕೆ ಹಾಕಿಸಿಕೊಳ್ಳಲು ತೆರಳುವವರಿಗೆ ಅನುಮತಿ ಇದೆ
18 ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸೇವೆ ಇರುವುದಿಲ್ಲ, ಖಾಸಗಿ ಬಸ್ ಓಡಾಟಕ್ಕೂ ಅವಕಾಶ ಇಲ್ಲ
19 ರಿಯಾಲಿಟಿ ಷೋ ಚಿತ್ರೀಕರಣ ಎರಡು ವಾರ ಬಂದ್ ಆಗಲಿವೆ, ಎರಡು ವಾರ ಚಿತ್ರೀಕರಣಕ್ಕೆ ಅವಕಾಶ ಇಲ್ಲ