ನಾಲ್ಕನೇ ಹೆಂಡತಿ ಇದ್ದರೂ 13 ವರ್ಷದ ಮಗಳನ್ನೂ ಬಿಡಲಿಲ್ಲ ಕಾಮಾಂಧ ತಂದೆ...

rape
Published on

ಹೈದರಾಬಾದ್​: ಕರೊನಾ ಲಾಕ್​ಡೌನ್​ ವೇಳೆ ಮನೆಗೆ ಬಂದಿದ್ದ 13 ವರ್ಷದ ಮಗಳ ಮೇಲೆ ಹೆತ್ತಪ್ಪನೇ ಅತ್ಯಾಚಾರವೆಸಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇದುವರೆಗೂ ನಾಲ್ಕು ಮದುವೆ ಆಗಿರುವ ಕಾಮರೂಪಿ ತಂದೆ ಅಪ್ತಾಪ್ತ ವಯಸ್ಸಿನ ಮಗಳನ್ನೂ ಬಿಟ್ಟಿಲ್ಲ. ಬಾಲಕಿಯನ್ನು ಬಲವಂತವಾಗಿ ನಿತ್ಯ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದು, ವಿಷಯ ಹೊರ ಬಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಎರಡು ತಿಂಗಳ ಬಳಿಕ ಮಲತಾಯಿ ಬಳಿ ಬಾಲಕಿ ತನ್ನ ಮೇಲಾಗುತ್ತಿರುವ ದೌರ್ಜನ್ಯ ಹೇಳಿಕೊಂಡಿದ್ದು, ಮಲತಾಯಿಯೇ ಖುದ್ದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ತೆಲಂಗಾಣದ ವಿಕರಾಬಾದ್ ಜಿಲ್ಲೆಯ ಕರಣಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದ್ದು, 37 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ. ಈತ ಒಟ್ಟು ನಾಲ್ಕು ಮದುವೆ ಆಗಿದ್ದಾನೆ. ಮೊದಲ ಮತ್ತು ಎರಡನೇ ವಿವಾಹ ವಿಚ್ಛೇದನ ಆಗಿದೆ. ಇನ್ನು ಮೂರನೇ ಹೆಂಡತಿ ತೀರಿಕೊಂಡಿದ್ದಾಳೆ. ನಾಲ್ಕನೇ ಹೆಂಡತಿ ಇದ್ದಾರೆ. ಅತ್ಯಾಚರಕ್ಕೊಳಗಾದ ಬಾಲಕಿ ಮೂರನೇ ಹೆಂಡತಿಯ ಮಗಳು. ಆರೋಪಿ 4ನೇ ಪತ್ನಿ, ಮಗ, ಮತ್ತು ತಾಯಿ ಜತೆ ವಾಸವಿದ್ದ. ಮಗಳು ಬೇರೆ ಜಿಲ್ಲೆಯ ಧಾರ್ಮಿಕ ಶಾಲೆಯಲ್ಲಿ ಓದುತ್ತಿದ್ದಳು.

ಮಾರ್ಚ್‌ನಲ್ಲಿ ಕರೊನಾ ಪರಿಣಾಮ ಶಿಕ್ಷಣ ಸಂಸ್ಥೆಗಳು ಬಂದ್​ ಆಗಿದ್ದರಿಂದ ಬಾಲಕಿ ಮನೆಗೆ ಮರಳಿದ್ದಳು. ಆಗಿನಿಂದ ಮಗಳ ಮೇಲೆ ತಂದೆ ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ. ಯಾರಿಗೂ ವಿಷಯ ಹೇಳದಂತೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಈತನ ಕೃತ್ಯ ಕುಟುಂಬಸ್ಥರಿಗೂ ತಿಳಿದಿರಲಿಲ್ಲ. ಇತ್ತೀಚೆಗೆ ಮನೆಯಲ್ಲಿ ನಡೆದ ಹಬ್ಬದ ಹಿಂದಿನ ದಿನವೂ ಲೈಂಗಿಕ ದೌರ್ಜನ್ಯವೆಸಗಿದ್ದು, ಹಿಂಸೆ ಸಹಿಸಲಾಗದೆ ತನ್ನ ಮಲತಾಯಿ ಬಳಿ ಸಂತ್ರಸ್ತೆ ಎಲ್ಲವನ್ನೂ ಹೇಳಿಕೊಂಡಿದ್ದಾಳೆ.

ಕೂಡಲೇ ಸಂತ್ರಸ್ತೆಯ ತಾಯಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 375 (ಅತ್ಯಾಚಾರ) ಮತ್ತು ಪೋಕ್ಸೋ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net