

ನವದೆಹಲಿ: ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಇತ್ತೀಚಿನ ನಿದರ್ಶನ ಹದಿಮೂರು ವರ್ಷದ ಈ ಬಾಲಕ. ಕ್ಯಾಲಿಫೋರ್ನಿಯಾದ ಜಾಕ್ ರಿಕೋ ಎಂಬ ಈ ಬಾಲಕ ಎರಡು ವರ್ಷಗಳ ಅವಧಿಯಲ್ಲಿ ನಾಲ್ಕು ವಿಷಯಗಳಲ್ಲಿ ಪದವಿ ಪಡೆದಿದ್ದಾನೆ.
ಜಗತ್ತಿನ ಅತಿ ಚಿಕ್ಕ ವಯಸ್ಸಿನ ಪದವೀಧರ ಎನಿಸಿಕೊಂಡಿರುವ ಈ ಬಾಲಕ ಓದಿದ್ದು ಕ್ಯಾಲಿಫೋರ್ನಿಯಾದ ಫುಲರ್ಟನ್ ಕಾಲೇಜ್ನಲ್ಲಿ. ಇತಿಹಾಸ, ಸಮಾಜ ವಿಜ್ಞಾನ, ಸಾಮಾಜಿಕ ನಡವಳಿಕೆ ಹಾಗೂ ಮಾನವೀಯ ಅಭಿವ್ಯಕ್ತಿ ಈ ವಿಷಯಗಳಲ್ಲಿ ಪದವಿ ಪಡೆದಿರುವ ಜಾಕ್, ‘ನಾನು ಓದುವುದನ್ನು ಇಷ್ಟಪಡುತ್ತೇನೆ. ಜಗತ್ತಿನ ಬಗ್ಗೆ ಇನ್ನಷ್ಟು ತಿಳಿಯುವ ಆಸಕ್ತಿಯಿದೆ’ ಎಂದು ಮಾಧ್ಯಮವೊಂದರ ಜತೆಗಿನ ಮಾತುಕತೆಯಲ್ಲಿ ಹೇಳಿಕೊಂಡಿದ್ದಾನೆ.
ಇಂಥ ಮೇಧಾವಿ ವಿದ್ಯಾರ್ಥಿಗೆ ಪದವಿ ನೀಡಲು ಕಾಲೇಜಿನ ಆಡಳಿತ ಮಂಡಳಿ ಕೂಡ ಸಂತೋಷಪಟ್ಟಿದೆ.