ನೀರು ತುಂಬಿದ್ದ ಬಕೆಟ್‌ ಒಳಗೆ ತಲೆಕೆಳಗಾಗಿ ಬಿದ್ದು 13 ತಿಂಗಳ ಮಗು ಮೃತ್ಯು

baby death
Published on

ಭೋಪಾಲ್​​: ಪ್ರಪಂಚದ ಖುಷಿಯನ್ನು ಅನುಭವಿಸುವ ಮೊದಲೇ 13 ತಿಂಗಳ ಮುದ್ದಾದ ಮಗುವೊಂದು ಸಾವನ್ನಪ್ಪಿರುವ ಘಟನೆ ಭೋಪಾಲ್​ನ ಗೇಹುನ್​ ಖೇಡಾ ಬಳಿ ನಡೆದಿದೆ.

ಮುದ್ದಾಸಿರ್ ಖಾನ್ ಮೃತ ಮಗು. ಆಟವಾಡುತ್ತಿದ್ದಾಗ 13 ತಿಂಗಳ ಮಗು ನೀರು ತುಂಬಿದ ಬಕೆಟ್‌ನಲ್ಲಿ ಬಿದ್ದಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದೆ. ಕುಟುಂಬಸ್ಥರು ಹಾಗೂ ಹೆತ್ತವರ ರೋಧನೆ ಮುಗಿಲು ಮುಟ್ಟಿದೆ.

ದಂಪತಿ ತಮ್ಮ ಮುದ್ದು ಮಗ ಮುದ್ದಾಸಿರ್ ಖಾನ್ ಅವರನ್ನು ಕರೆದುಕೊಂಡು ಸಂಬಂಧಿಕರ ಮನೆಗೆ ಹೋಗಿದ್ದರು. ಮಗುವನ್ನು ಆಟವಾಡಲು ಬಿಟ್ಟು ದಂಪತಿ ಅತಿಥಿಗಳೊಂದಿಗೆ ಮಾತನಾಡುವುದರಲ್ಲಿ ನಿರತರಾಗಿದ್ದಾಗ, ಮುದ್ದಸಿರ್ ಕೋಣೆಯಿಂದ ಹೊರಬಂದು ಅಂಗಳದಲ್ಲಿ ಇಟ್ಟಿದ್ದ ಬಕೆಟ್‌ನಲ್ಲಿ ಆಟವಾಡಲು ಪ್ರಾರಂಭಿಸಿದೆ.

ಆಟವಾಡುತ್ತಿದ್ದಾಗ ಬಕೆಟ್‌ನಲ್ಲಿ ತಲೆಕೆಳಗಾಗಿ ಮಗು ಬಿದ್ದಿದೆ. ಪೋಷಕರು ನೀರಿನಲ್ಲಿ ಬಿದ್ದಿರುವುದನ್ನು ಗಮನಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತ ಪಟ್ಟಿದೆ. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಇನ್ನೂ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ಪೊಲೀಸ್​​​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net