ಏಷ್ಯನ್​ ಈಜು: ರಾಜ್ಯದ ಧಿನಿಧಿ, ತನಿಷಿ, ದರ್ಶನ್​ಗೆ ಕಂಚು

ಏಷ್ಯನ್​ ಈಜು: ರಾಜ್ಯದ ಧಿನಿಧಿ, ತನಿಷಿ, ದರ್ಶನ್​ಗೆ ಕಂಚು
ಏಷ್ಯನ್​ ಈಜು: ರಾಜ್ಯದ ಧಿನಿಧಿ, ತನಿಷಿ, ದರ್ಶನ್​ಗೆ ಕಂಚು
Published on
ಬೆಂಗಳೂರು: ಕರ್ನಾಟಕದ ಈಜುಪಟುಗಳಾದ ಒಲಿಂಪಿಯನ್​ ಧಿನಿಧಿ ದೇಸಿಂಘು, ತನಿಷಿ ಗುಪ್ತಾ ಮತ್ತು ದರ್ಶನ್​ ಎಸ್​. ಬ್ಯಾಂಕಾಕ್​ನಲ್ಲಿ ನಡೆಯುತ್ತಿರುವ 12ನೇ ಏಷ್ಯನ್​ ಏಜ್​ ಗ್ರೂಪ್​ ಈಜು ಚಾಂಪಿಯನ್​ಷಿಪ್​ನ (ASIAN AGE GROUP CHAMPIONSHIP) ಮೂರನೇ ದಿನ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಧಿನಿಧಿ, ತನಿಷಿ ಜತೆಗೆ ಜಿಯಾ ಯಾದವ್​, ಸಾನ್ವಿ ದೇಸ್ವಾಲ್​ ಒಳಗೊಂಡ ಭಾರತ ತಂಡ ಭಾನುವಾರ ನಡೆದ ಬಾಲಕಿಯರ 4/100 ಮೀ. ಮೆಡ್ಲೆ ರಿಲೇ ವಿಭಾಗದ ಬಿ ಗ್ರೂಪ್​ನಲ್ಲಿ 4 ನಿಮಿಷ, 16.85 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಕಂಚಿನ ಪದಕ ಒಲಿಸಿಕೊಂಡರು.

ದರ್ಶನ್​ ಎಸ್​. ಬಾಲಕರ 200 ಮೀ. ಬಟರ್​ಫ್ಲೈ ವಿಭಾಗದ ಎ ಗ್ರೂಪ್​ನಲ್ಲಿ 2 ನಿಮಿಷ, 1.94 ಸೆಕೆಂಡ್​ಗಳಲ್ಲಿ ಈಜಿ ಕಂಚು ಜಯಿಸಿದರು. ದರ್ಶನ್​ 800 ಮೀ. ಫ್ರೀಸ್ಟೈಲ್​ ವಿಭಾಗದಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇದಕ್ಕೆ ಮುನ್ನ ಶನಿವಾರ ಧಿನಿಧಿ, ಬಾಲಕಿಯರ 200 ಮೀ. ಫ್ರೀಸ್ಟೈಲ್ ವಿಭಾಗದ ಬಿ ಗುಂಪಿನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಶರಣ್​ ಶ್ರೀಧರ 200 ಮೀ. ಫ್ರೀಸ್ಟೈಲ್​ನಲ್ಲಿ, ತನಿಷಿ ಗುಪ್ತಾ ಬಾಲಕಿಯರ 50 ಮೀ. ಬಟರ್​ಫ್ಲೈನಲ್ಲಿ ಕಂಚು ಜಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net