ರಿಚ್ಮೊಂಡ್​​ನಲ್ಲಿ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಪ್ರಾರಂಭ!

12th akka sammelana in richmond (1)
Published on
Benki Basanna 1
ಪ್ರತ್ಯಕ್ಷ ವರದಿ -by ಬೆಂಕಿ ಬಸಣ್ಣ, ನ್ಯೂ ಯಾರ್ಕ್

ಅಮೆರಿಕಾ: ವರ್ಜೀನಿಯ ರಾಜ್ಯದಲ್ಲಿರುವ ರಿಚ್ಮೊಂಡ್ ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಇಂದು ಸಂಜೆ ಅದ್ದೂರಿಯಾಗಿ ಪ್ರಾರಂಭವಾಯಿತು.

ಅಕ್ಕ ಸಂಸ್ಥೆಯ ಅಧ್ಯಕ್ಷ ರವಿ ಬೋರೇಗೌಡ, ಅಕ್ಕ ಸಂಸ್ಥೆಯ ಛೇರ್ಮನ್ ಡಾ. ಅಮರನಾಥ ಗೌಡ, ಸುತ್ತೂರು ಮಠದ ಶ್ರೀದೇಶಿಕೇಂದ್ರ ಸ್ವಾಮಿಗಳು, , ವಿಧಾನ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಹೊರಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ, ಥಟ್ ಅಂತ ಹೇಳಿ ಖ್ಯಾತಿಯ ಡಾಕ್ಟರ್ ನಾ ಸೋಮೇಶ್ವರ ಮುಂತಾದ ಗಣ್ಯರು ದೀಪ ಹಚ್ಚುವ ಮೂಲಕ ಉದ್ಘಾಟನೆ ಮಾಡಿದರು.

ಅಕ್ಕ ಸಂಸ್ಥೆಯು ಸ್ಥಳೀಯ ರಿಚ್ಮೊಂಡ್ ಕನ್ನಡ ಸಂಘ ಮತ್ತು ವಾಷಿಂಗ್ಟನ್ ನ ಕಾವೇರಿ ಕನ್ನಡ ಸಂಘ ಇವರ ಸಹಯೋಗದಲ್ಲಿ ಈ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸುತ್ತಿದೆ. ಇದರಲ್ಲಿ ದೇಶ ವಿದೇಶಗಳಿಂದ ಆಗಮಿಸಿರುವ ಸುಮಾರು 5000 ಕನ್ನಡಿಗರು ಭಾಗವಹಿಸುತ್ತಿದ್ದಾರೆ.

ಇಂದು ರಾತ್ರಿ ಊಟಕ್ಕೆ ಸುಮಾರು 20 ಬಗೆಯ ವಿವಿಧ ರುಚಿಯಾದ ಖಾದ್ಯ ಗಳನ್ನು ಮಾಡಿದ್ದರು.ಇಲ್ಲಿಯ ಸ್ಥಳೀಯ ಕನ್ನಡ ಕಲಾವಿದರು ನಿರ್ಮಿಸಿರುವ ಕನ್ನಡ ಭುವನೇಶ್ವರಿಯ 3D ಮೂರ್ತಿ, ಮೈಸೂರು ಅರಮನೆ, ಚನ್ನಕೇಶವ ದೇವಸ್ಥಾನದ ಪ್ರತಿಕೃತಿಗಳು ( ಟ್ಯಾಬ್ಲೋ ಗಳು ) ಎಲ್ಲರನ್ನು ಆಕರ್ಷಸಿದವು.

ಸ್ಥಳೀಯ ಕನ್ನಡ ಸಂಘಗಳ ನಡೆಸಿ ಕೊಟ್ಟ ಸ್ವಾಗತ ನೃತ್ಯ, ಹುಲಿ ಕುಣಿತ, ಕಂತಾರ ಯಕ್ಷಗಾನ ಕುಣಿತ ತುಂಬಾ ಚೆನ್ನಾಗಿದ್ದವು. ಇವತ್ತು ಶುಕ್ರವಾರ ರಾತ್ರಿ ಸಂಗೀತ ಸಂಜೆ ಪ್ರೈಮ್ ಟೈಮ್ ಶೋನಲ್ಲಿ ನವೀನ್ ಸಜ್ಜು ಅವರ ತಂಡ ಸಾವಿರಾರು ಜನರನ್ನು ರಂಜಿಸಿತು.

ಈ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಸಿನೆಸ್ ಫೋರಮ್, ವುಮೆನ್ಸ್ ಫೋರಮ್, ಮೆರವಣಿಗೆ, ಹರಟೆ ಕಾರ್ಯಕ್ರಮ, Akka Idol, ಫ್ಯಾಷನ್ ಶೋ, ಸಾಹಿತ್ಯ ಚರ್ಚೆ ಸಾಹಿತ್ಯಕ ಹೀಗೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net