ಅಂತರ್ಯುದ್ಧ ಪೀಡಿತ ಸುಡಾನ್​ನಿಂದ 129 ಕನ್ನಡಿಗರು ಬೆಂಗಳೂರಿಗೆ ವಾಪಸ್!

sudhan
Published on

ಬೆಂಗಳೂರು: ಯುದ್ಧ ಪೀಡಿತ ದೇಶ ಸುಡಾನ್​ನಿಂದ 129 ಜನ ಕನ್ನಡಿಗರನ್ನು ಆಪರೇಷನ್​ ಕಾವೇರಿಯ ಅಡಿಯಲ್ಲಿ ವಾಪಸ್​ ಕರೆತರಲಾಗಿದ್ದು, ಎಲ್ಲರೂ ಸುರಕ್ಷಿತವಾಗಿ ಬೆಂಗಳೂರಿಗೆ ಬಂದು ತಲುಪಿದ್ದಾರೆ.

ಸುಡಾನ್ ನಿಂದ ಸೌದಿಯ ಜೆಡ್ಡಾಕ್ಕೆ ತೆರಳಿದ 329 ಜನ ಭಾರತೀಯರು ಅಲ್ಲಿಂದ ಸ್ವದೇಶಕ್ಕೆ ಹಿಂತಿರುಗಿದ್ದಾರೆ. 329 ಜನ ಭಾರತೀಯರಲ್ಲಿ 129 ಜನ ಕನ್ನಡಿಗರೂ ಇದ್ದು, ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಕೆಐಎ ನಲ್ಲಿ 129ಜನರಿಗೂ ಆರೋಗ್ಯ ತಪಾಸಣೆ ಮಾಡಲಾಗಿದ್ದು, ವಿದೇಶಗಳಿಂದ ಬರುತ್ತಿರುವ ಕಾರಣ ಫೀವರ್ ಟೆಸ್ಟ್​ಗೆ ಒಳಪಡಿಸಲಾಗಿದೆ. ಕೆಐಎನಿಂದ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಕನ್ನಡಿಗರ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನೊಡಲ್ ಅಧಿಕಾರಿ ಆರ್.ಮನೋಜ್ ರವರ ನೇತೃತ್ವದಲ್ಲಿ ಕನ್ನಡಿಗರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ. ಕೆಐಎನಿಂದ ಮೂರು ಬಸ್​ಗಳಲ್ಲಿ ತವರು ಜಿಲ್ಲೆಗಳಿಗೆ ಕನ್ನಡಿಗರನ್ನು ಕಳಿಸಿಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net