More

    ಕಾರ್ಖಾನೆಯೊಂದರಲ್ಲಿ ವಿಷ ಅನಿಲ ಸೋರಿಕೆ: 9 ಜನ ಮೃತ್ಯು, 11 ಮಂದಿ ಅಸ್ವಸ್ಥ

    ಪಂಜಾಬ್​: ಕಾರ್ಖಾನೆಯೊಂದರಲ್ಲಿ ವಿಷ ಅನಿಲ ಸೋರಿಕೆಯಾಗಿ 9 ಜನ ಸಾವನ್ನಪ್ಪಿದ್ದು, 11 ಮಂದಿ ಅಸ್ವಸ್ಥಗೊಂಡಿರುವ ಘಟನೆ ಲೂಧಿಯಾನದ ಗಿಯಾನ್​​ ಪ್ರದೇಶದಲ್ಲಿ ನಡೆದಿದೆ.

    ಇಂದು ಬೆಳಗ್ಗೆ 7:15ರ ವೇಳೆಗೆ ಅನಿಲ ಸೋರಿಕೆಯಾಗಿರುವುದು ಗಮನಕ್ಕೆ ಬಂದಿದೆ. ಘಟನೆಯಲ್ಲಿ 9 ಜನರು ಸಾವನ್ನಪ್ಪಿದ್ದು ಹತ್ತಾರು ಜನರು ವಿಷ ಅನಿಲ ಸೇವಿಸಿ ಅಸ್ವಸ್ಥರಾಗಿದ್ದಾರೆ. ಕಾರ್ಖಾನೆಯಲ್ಲಿ ಇನ್ನೂ ಅನೇಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಇದನ್ನೂ ಓದಿ: ಮೂಗುತಿ, ಓಲೆಗಾಗಿ ವೃದ್ಧೆ ಕೊಲೆ; ಜೈಲಿನಲ್ಲೇ ಪ್ರಾಣ ಬಿಟ್ಟ ಕಳ್ಳ!

    ಡೈರಿ ಉತ್ಪನ್ನಗಳನ್ನು ಉತ್ಪಾದಿಸುವ ಕಾರ್ಖಾನೆಯಾದ ಗೋಯಲ್ ಮಿಲ್ಕ್ ಪ್ಲಾಂಟ್‌ನ ಕೂಲಿಂಗ್ ಸಿಸ್ಟಮ್‌ನಿಂದ ಅನಿಲ ಸೋರಿಕೆಯಾಗಿದೆ. ಇದರಿಂದ ಸಮೀಪದ ನಿವಾಸಿಗಳು ತಮ್ಮ ಮನೆಗಳಲ್ಲಿಯೇ ಮೂರ್ಛೆ ಹೋಗಿದ್ದಾರೆ.

    ಅನಿಲ ಸೋರಿಕೆ ವಿಚಾರ ಬೆಳಕಿಗೆ ಬರುತ್ತಲೇ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.

    ರಾಣೆಬೆನ್ನೂರ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ವಿರುದ್ಧ ಎಫ್ಐಆರ್ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts