ಸರ್ಕಾರಿ ಶಾಲೆಗಳ ಕುಡಿಯುವ ನೀರಿಗೆ 120 ಕೋಟಿ ರೂ. ಬಿಡುಗಡೆ, ನಿರ್ವಹಣೆ ಹೇಗೆ ಗೊತ್ತಾ?

Water TAP
Published on

ಬೆಂಗಳೂರು: 2023-24ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಗಳ ವಾರ್ಷಿಕ ನಿರ್ವಹಣೆಗಾಗಿ 120.33 ಕೋಟಿ ರೂ.ಗಳನ್ನು ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿದೆ.

ಬಜೆಟ್‌ನಲ್ಲಿ ೋಷಿಸಿದ್ದಂತೆ ಶಾಲೆಗಳ ನಿರ್ವಹಣೆಗೆ ಖರ್ಚು ಭರಿಸಲು ಶಾಲಾ ಕಟ್ಟಡಗಳ ನಿರ್ವಹಣೆ, ಎಸ್‌ಸಿಪಿ/ಟಿಎಸ್‌ಪಿ ಯೋಜನೆ ಹಾಗೂ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಯೋಜನೆಗಳಅಡಿಯಲ್ಲಿ ನಿಗದಿಯಾದ ಅನುದಾನವನ್ನು ಶಾಲೆಗಳಿಗೆ ಘಟಕ ವೆಚ್ಚ ಮತ್ತು ಅನುದಾನವನ್ನು ನಿಗದಿ ಮಾಡಲಾಗಿದೆ.

ಪ್ರಾಥಮಿಕ ಶಾಲೆಗಳು ಮತ್ತು ಕೆಕೆಜಿಬಿವಿ ಮುಂತಾದ ಡಿಡಿಒ ಇಲ್ಲದಿರುವ ಶಾಲೆಗಳಲ್ಲಿ ಅನುದಾನವನ್ನು ಎಸ್‌ಡಿಎಂಸಿ ಬ್ಯಾಂಕ್ ಖಾತೆಯಲ್ಲಿಟ್ಟು ನಿರ್ವಹಿಸುವುದು. ಪ್ರೌಢಶಾಲೆ ಮತ್ತು ಕೆಪಿಎಸ್ ಶಾಲೆಗಳು ಡಿಸಿ ಬಿಲ್‌ಇನ ಮೂಲಕ ಖಜಾನೆಯಲ್ಲಿ ವೆಚ್ಚ ಭರಿಸಬಹುದು. ಎಸ್‌ಡಿಎಂಸಿ ಬ್ಯಾಂಕ್ ಖಾತೆಗೆ ಠೇವಣಿ ಮಾಡಿದ ಹಣವನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೇಲ್ವಿಚಾರಣೆ ಮಾಡುವಂತೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net