

ನವದೆಹಲಿ: ನಕಲಿ ಡ್ರೈವಿಂಗ್ ಲೈಸೆನ್ಸ್(ಡಿಎಲ್) ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದ 12 ಜನ ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ದೆಹಲಿ ಪೊಲೀಸ್ ಇಲಾಖೆಗೆ 2007ರಲ್ಲಿ ಪಿಸಿಆರ್ ಡ್ರೈವರ್ಗಳಾಗಿ ಇವರನ್ನು ನೇಮಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.
2007ರಲ್ಲಿ ಪೊಲೀಸ್ ಕಂಟ್ರೋಲ್ ರೂಮ್ ಚಾಲಕರ ಹುದ್ದೆಗಳಿಗೆ ನಿಯುಕ್ತಿ ನಡೆದಿತ್ತು. ಆ ಸಮಯದಲ್ಲಿ 12 ಜನರು ನಕಲಿ ಡಿಎಲ್ಗಳನ್ನು ಸಲ್ಲಿಸಿದ್ದರು. 2012ರಲ್ಲಿ ಅದೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬನ ಡಿಎಲ್ನ ಸಿಂಧುತ್ವ ಪರೀಕ್ಷೆ ಮಾಡಿದಾಗ ಮೂಡಿದ ಅನುಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)