ಏಷ್ಯನ್​ ಈಜು: ರಾಜ್ಯದ ಧಿನಿಧಿ ದೇಸಿಂಘುಗೆ ಚಿನ್ನದ ಪದಕ

ಏಷ್ಯನ್​ ಈಜು: ರಾಜ್ಯದ ಧಿನಿಧಿ ದೇಸಿಂಘುಗೆ ಚಿನ್ನದ ಪದಕ
ಏಷ್ಯನ್​ ಈಜು: ರಾಜ್ಯದ ಧಿನಿಧಿ ದೇಸಿಂಘುಗೆ ಚಿನ್ನದ ಪದಕ
Published on
ಬೆಂಗಳೂರು: ಕರ್ನಾಟಕದ ಒಲಿಂಪಿಯನ್​ ಈಜು ತಾರೆ ಧಿನಿಧಿ ದೇಸಿಂಘು ಬ್ಯಾಂಕಾಕ್​ನಲ್ಲಿ ನಡೆಯುತ್ತಿರುವ 12ನೇ ಏಷ್ಯನ್​ ಏಜ್​ ಗ್ರೂಪ್​ ಈಜು ಚಾಂಪಿಯನ್​ಷಿಪ್​ನಲ್ಲಿ (ASIAN AGE GROUP CHAMPIONSHIP) ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ರಾಜ್ಯದ ಇತರ ಈಜುಪಟುಗಳಾದ ಶರಣ್​ ಶ್ರೀಧರ ಮತ್ತು ತನಿಷಿ ಗುಪ್ತಾ ಕಂಚಿನ ಪದಕ ಒಲಿಸಿಕೊಂಡರು.

ಧಿನಿಧಿ ಶನಿವಾರ ನಡೆದ ಬಾಲಕಿಯರ 200 ಮೀ. ಫ್ರೀಸ್ಟೈಲ್​ ವಿಭಾಗದ ಬಿ ಗುಂಪಿನಲ್ಲಿ 2 ನಿಮಿಷ, 1.81 ಸೆಕೆಂಡ್​ಗಳಲ್ಲಿ ಈಜುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಶರಣ್​ ಶ್ರೀಧರ 200 ಮೀ. ಫ್ರೀ
ಸ್ಟೈಲ್​​ ಬಾಲಕರ ಬಿ ಗ್ರೂಪ್​ನಲ್ಲಿ 1 ನಿಮಿಷ, 55.09 ಸೆಕೆಂಡ್​ಗಳಲ್ಲಿ ಈಜಿ ಕಂಚು ಜಯಿಸಿದರು. ಎ ಗ್ರೂಪ್​ನಲ್ಲಿ ರಾಜ್ಯದ ದರ್ಶನ್​ ಎಸ್​. 4ನೇ ಸ್ಥಾನದೊಂದಿಗೆ ಪದಕ ವಂಚಿತರಾದರು.

ತನಿಷಿ ಗುಪ್ತಾ ಬಾಲಕಿಯರ 50 ಮೀ. ಬಟರ್​ಫ್ಲೈ ವಿಭಾಗದ ಎ ಗ್ರೂಪ್​ನಲ್ಲಿ 27.91 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಕಂಚಿನ ಪದಕ ಗೆದ್ದುಕೊಂಡರು. ಮಿಶ್ರ 4/100 ಮೀ. ಫ್ರೀ
ಸ್ಟೈಲ್​ ವಿಭಾಗದ ಬಿ ಗ್ರೂಪ್​ನಲ್ಲಿ ಅಕ್ಷಜ್​ ಠಾಕುರಿಯಾ, ತನಿಷಿ ಗುಪ್ತಾ, ಧಿನಿಧಿ ದೇಸಿಂಘು ಮತ್ತು ಸಮರ್ಥ್​ ಗೌಡ ಒಳಗೊಂಡ ಭಾರತ ತಂಡ ಕಂಚಿನ ಪದಕ ಜಯಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net