

ಮಧ್ಯಪ್ರದೇಶ : ( Shah Rukh Khan) 11 ವರ್ಷದ ಬಾಲಕ ಬಾಲಿವುಡ್ನ ಸ್ಟಾರ್ ನಟ ಶಾರೂಖ್ ಖಾನ್ರ ಅಪ್ಪಟ ಅಭಿಮಾನಿ. ಮಧ್ಯಪ್ರದೇಶದ ಭೋಪಾಲ್‌ನ 11 ವರ್ಷದ ಬಾಲಕ ಶಾರುಖ್ ಖಾನ್ ಮಾಡಿದಂತೆ, ಯಾವಾಗ ನೋಡಿದ್ರೂ, ಅದೇ ಸ್ಟೈಲ್ನಲ್ಲಿ ಫೈಟ್ ಮಾಡೋದು, ಆ್ಯಕ್ಟ್ ಮಾಡೋದು, ಡೈಲಾಗ್ ಹೇಳೋದನ್ನ ಮಾಡ್ತಿದ್ದನಂತೆ. ಇದೀಗ ಶಾರೂಖ್ ಅವರ ಈ ಪುಟ್ಟ ಅಭಿಮಾನಿ ಮಾಡಿದ ಕೆಲಸ ಸಖತ್ ಸುದ್ದಿಯಾಗಿದೆ.
ಬಾಲಕ, ನಾನ್ಯಾಕೆ ಶಾರೂಖ್ ಅವರಂತೆ ಸ್ಟಂಟ್ಸ್ ಮಾಡಬಾರದು ಅಂತ ಎರಡ್ಮೂರು ಸರಿ, ಜವಾನ್ ಸಿನಿಮಾ ನೋಡಿದ್ದ. ಯಾವಾಗ ಸ್ಟಂಟ್ ಮಾಡ್ತಿದ್ನೋ, ಆಗ ಆ ಬಾಲಕನ ತಂದೆಯಿಂದ ಬೈಗುಳ, ಇನ್ನೊಂದು ಕಡೆ ಏಟು. ಇದ್ರಿಂದ ಹೆಚ್ಚಾಗಿ ಬೇಜಾರಾಗಿದ್ದನು. ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದನು ಇದನ್ನು ಗಮನಿಸಿದ ಸ್ಥಳೀಯರು ಈತನ ಕುರಿತಾಗಿ ತಂದೆಗೆ ದೂರುತ್ತಿದ್ದರು. ಕೋಪ ಮಾಡಿಕೊಂಡು ಆ ಹುಡುಗನಿಗೆ ಹೊಡೆದಿದ್ದಾನೆ. ಆಗ ಅಪ್ಪನ ವಿರುದ್ಧ ಮಗ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾನೆ.
ಯಾರ ಸ್ಟಂಟ್ಸ್ ನೋಡಿ ಇನ್ಸ್ಪೈರ್ ಆದ್ನೋ, ಅದೇ ಶಾರೂಖ್ ಖಾನ್ಗೆ ಅಪ್ಪನ ವಿರುದ್ಧ ದೂರು ಕೊಡೋಣ ಅಂತ ತೀರ್ಮಾನ ಮಾಡಿಬಿಟ್ಟಿದ್ದಾನೆ. ಯಾರಿಗೂ ಹೇಳದೆ, ಕೇಳದೆ ಮನೆ ಬಿಟ್ಟು ಬಂದ್ ಬಿಟ್ಟಿದ್ದಾನೆ. ಉತ್ತರಪ್ರದೇಶದಿಂದ ಮುಂಬೈಗೆ ಹೊರಡೋ ಟ್ರೈನ್ನ ಹತ್ತಿದ್ದಾನೆ. ಆ ರೈಲು, ಮಧ್ಯಪ್ರದೇಶದ ಭೋಪಾಲ್‌ನ ಸಂತ ಹಿರ್ದಾರಾಂ ಸಿಟಿ ರೈಲ್ವೆ ಸ್ಟೇಷನ್ಗೆ ಬಂದಾಗ, ರೈಲ್ವೆ ಪೊಲೀಸರು ಸುಮಾರು ಹೊತ್ತು, ಆ ಬಾಲಕನನ್ನ ಗಮನಿಸಿದ್ದಾರೆ.
ಆ ಬಾಲಕನನ್ನು ವಿಚಾರಿಸಿದ ಪೊಲೀಸ್ರು, ಶಾರೂಖ್ ಖಾನ್ ಭೇಟಿಯಾಗೋದಕ್ಕೆ ಮುಂಬೈಗೆ ಹೋಗ್ತಿದೀನಿ. ನನ್ನ ಅಪ್ಪ ನನಗೆ ಹೊಡೆದಿದ್ದಾರೆ. ಬೈದಿದ್ದಾರೆ. ಅದಕ್ಕೋಸ್ಕರ ಕಂಪ್ಲೇಂಟ್ ಕೊಡೋಕೆ ಹೋಗ್ತಿದ್ದಿನಿ ಅಂತ ಬಾಲಕ ಹೇಳಿದ್ದಾನೆ. ಆಮೇಲೆ ಆ ಬಾಲಕನನ್ನ ವಶಕ್ಕೆ ಪಡೆದ ಪೊಲೀಸ್ರು, ಈ ಬಗ್ಗೆ ಬಾಲಕನ ತಂದೆಗೆ ಮಾಹಿತಿ ಕೊಟ್ಟಿದ್ದಾರೆ. ಮನೆಬಿಟ್ಟು ಬಂದ ಮಗುವನ್ನು ಪೊಲೀಸರು ರಕ್ಷಣೆ ಮಾಡಿ, ಪೋಷಕರಿಗೆ ಒಪ್ಪಿಸಿದ್ದಾರೆ.
ಸಿನಿಮಾದಲ್ಲಿ ಶಾರೂಖ್ ಖಾನ್ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡೋ ರೀತಿ, ತನ್ನನ್ನು ಹೊಡೆದ ಅಪ್ಪನಿಗೂ ಬುದ್ಧಿ ಕಲಿಸಬೇಕು ಅಂತ ಬಾಲಕ ಮುಂದಾಗಿದ್ದ ಅಂತ ಪೊಲೀಸರು ಹೇಳಿದ್ದಾರೆ.