

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ವಿದೇಶಕ್ಕೆ ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ಹೋಗುತ್ತಿದ್ದು, ಡ್ರಗ್ಸ್, ಸಿಮ್, ಪಾಸ್‌ಪೋರ್ಟ್ ಮತ್ತು ಮನಿಲ್ಯಾಂಡ್ರಿಂಗ್ ನಡೆದಿದೆ ಎಂದು ಬೆದರಿಸಿ ಡಿಜಿಟಲ್ ಆರೆಸ್ಟ್ ಮಾಡಿ ಸುಳಿಗೆ ಮಾಡುವ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದೆ.
ಪೊಲೀಸರಿಗೆ ತಡೆಗಟ್ಟಲು ಮತ್ತು ಸೈಬರ್ ಕಳ್ಳರ ಪತ್ತೆಹಚ್ಚುವುದು ಎರಡು ಸವಾಗಿದೆ. ರಾಜ್ಯದಲ್ಲಿ 641 ಡಿಜಿಟಲ್ ಆರೆಸ್ಟ್ ಪ್ರಕರಣಗಳು ದಾಖಲಾಗಿದ್ದು, 27 ಮಂದಿ ಮಾತ್ರ ಸೆರೆಸಿಕ್ಕಿದ್ದಾರೆ. 109 ಕೋಟಿ ರೂ. ದೋಚಿದ್ದು, ಈ ಪೈಕಿ ಕೇವಲ 9 ಕೋಟಿ ರೂ. ಪೊಲೀಸರು ಜಪ್ತಿ ಮಾಡಲು ಸಾಧ್ಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂಟರ್‌ನೆಟ್ ಕರೆ ಮಾಡುವ ಸೈಬರ್ ಕಳ್ಳರು, ೆಡೆಕ್ಸ್ ಅಥವಾ ಕೋರಿಯರ್ ಕಂಪನಿಯಿಂದ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ನಿಮ್ಮ ಹೆಸರಿನಲ್ಲಿ ವಿದೇಶಕ್ಕೆ ಪಾರ್ಸೆಲ್ ಹೋಗುತ್ತಿದೆ. ಅದರಲ್ಲಿ ಡ್ರಗ್ಸ್, ಸಿಮ್ ಕಾರ್ಡ್, ಪಾಸ್‌ಪೋರ್ಟ್, ಬಟ್ಟೆ ಮತ್ತು ನಗದು ಪತ್ತೆಯಾಗಿದೆ. ಈ ಕೇಸನ್ನು ಸಿಬಿಐ ಅಥವಾ ಮುಂಬೈ ಕ್ರೈಂ ಬ್ರಾಂಚ್‌ಗೆ ವರ್ಗಾವಣೆ ಮಾಡುತ್ತಿರುವುದಾಗಿ ಕರೆ ಕಟ್ ಮಾಡುತ್ತಾರೆ. ಕೆಲವೇ ನಿಮಿಷಕ್ಕೆ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ನಕಲಿ ಎ್ಐಆರ್, ಆರೆಸ್ಟ್ ವಾರಂಟ್‌ಗಳನ್ನು ಬೆದರಿಸುತ್ತಾರೆ.
ಸ್ಥಳೀಯ ಪೊಲೀಸರ ಸಹಾಯದಿಂದ ಆರೆಸ್ಟ್ ಮಾಡುವುದಾಗಿ ಬೆದರಿಸುತ್ತಾರೆ. ಬೇಡ ಅಂದಾಗ ಸ್ಕೈಪ್ ಆ್ಯಪ್‌ನಲ್ಲಿ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡುತ್ತಾರೆ. ಪೊಲೀಸ್ ಸಮವಸದಲ್ಲಿ ಇರುವ ವ್ಯಕ್ತಿ, ಸ್ಕೈಪ್ ಆ್ಯಪ್‌ನಲ್ಲಿ ವಿಡಿಯೋ ಕಾಲ್ ಮಾಡಿ ವಿಚಾರಣೆ ನೆಪದಲ್ಲಿ ಡಿಜಿಟಲ್ ಆರೆಸ್ಟ್ ಮಾಡುತ್ತಾರೆ. ಯಾರೊಂದಿಗೆ ಮಾತನಾಡುವಂತಿಲ್ಲ. ಯಾರಿಗೂ ಕರೆ ಮಾಡಬೇಡಿ. ಎಲ್ಲಿಗೂ ಹೋಗಬೇಡಿ ಎಂದು ಹೇಳಿ ಮನೆಯಲ್ಲಿಯೇ ಲಾಕ್ ಮಾಡಿ ಬ್ಯಾಂಕ್, ಆಧಾರ್ ಮತ್ತು ಪ್ಯಾನ್ ನಂಬರ್ ಪಡೆಯುತ್ತಾರೆ. ಇದಾದ ಮೇಲೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಉಗ್ರ ಚಟುವಟಿಕೆಗಳಿಗೆ ಹಣ ಸಂದಾಯವಾಗಿದೆ. ಮನಿಲ್ಯಾಂಡ್ರಿಂಗ್ ಕೇಸ್ ಸಹ ದಾಖಲಾಗಿದ್ದು, ಬ್ಯಾಂಕ್ ಖಾತೆ ಪರಿಶೀಲನೆ ಮಾಡಬೇಕಿದೆ.
ಆದರೆ, ನೀವು ಅಮಾಯಕರು ಎಂಬುದು ಗೊತ್ತಾಗುತ್ತಿದೆ. ಮನಿಲ್ಯಾಂಡ್ರಿಂಗ್ ಕೇಸ್‌ನಿಂದ ವಿಮುಕ್ತಿ ಮಾಡುವ ಉದ್ದೇಶಕ್ಕೆ ಕೇಂದ್ರ ಸರ್ಕಾರದ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದರೆ ತನಿಖೆ ಬಳಿಕ ವಾಪಸ್ ಕಳುಹಿಸುತ್ತೇವೆ ಎಂದು ಹೇಳುತ್ತಾರೆ. ಇತ್ತ ಅಮಾಯಕರು ತಮ್ಮ ಇರುವ ಹಣವನ್ನು ಸೈಬರ್ ಕಳ್ಳರು ಕೊಡುವ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿ ವಂಚನೆಗೆ ಒಳಗಾಗುತ್ತಾರೆ. ಬೆದರಿಕೆ ಕರೆಗಳಿಗೆ ಕಿವಿ ಕೊಡಬೇಡಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಕ್ರಿಪ್ಟೋ ಕರೆನ್ಸಿಗೆ ವರ್ಗಾವಣೆ :
ಅಮಾಯಕರನ್ನು ಡಿಜಿಟಲ್ ಆರೆಸ್ಟ್ ಮಾಡಿ ಅವರಿಂದ ಹಣ ವರ್ಗಾವಣೆ ಮಾಡಿಕೊಳ್ಳುವ ಸೈಬರ್ ಕಳ್ಳರು, ಕ್ರಿಪ್ಟೋ ಕರೆನ್ಸಿಗೆ ಬದಲಾವಣೆ ಮಾಡಿ ವಿದೇಶ ಬ್ಯಾಂಕ್ ಖಾತೆಗೆ ಕಳುಹಿಸುತ್ತಾರೆ. ಅಥವಾ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ವಿತ್ ಡ್ರಾ ಮಾಡಿಕೊಂಡು ತಮಗೆ ಬೇಕಾದ ಕೆಲಸಕ್ಕೆ ಬಳಸುತ್ತಾರೆ. ಆದರಿಂದ ಸೈಬರ್ ವಂಚನೆ ಕೇಸಿನಲ್ಲಿ ಹಣ ಪತ್ತೆಹಚ್ಚುವಲ್ಲಿ ಸವಾಲಿನ ಕೆಲಸವೆಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
1930ಕ್ಕೆ ಕರೆ ಮಾಡಿ :
ಸೈಬರ್ ಕ್ರೈಂಗೆ ಒಳಗಾದ ಕೂಡಲೇ ಗೋಲ್ಡನ್ ಅವರ್‌ನಲ್ಲಿ ಸೈಬರ್ ಹೆಲ್ಪ್‌ಲೈನ್ 1930ಗೆ ಕರೆ ಮಾಡಿ ದೂರು ದಾಖಲಿಸಿ. ಸೈಬರ್ ಕ್ರೈಂಗೆ ಬಳಸಿರುವ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ ಅದರಲ್ಲಿನ ಹಣ ವಾಪಸ್ ಪಡೆಯಬಹುದು. ತಡವಾದರೇ ಕಳ್ಳರುವಿತ್ ಡ್ರಾ ಅಥವಾ ಕ್ರಿಪ್ಟೋಗೆ ಬದಲಾವಣೆ ಮಾಡಿಕೊಂಡರೇ ಪತ್ತೆಹಚ್ಚುವುದು ಸಾಧ್ಯವಾಗುವುದಿಲ್ಲ.
ನಗರ ಪ್ರದೇಶದಲ್ಲೇ ಡಿಜಿಟಲ್ ಆರೆಸ್ಟ್ ಹೆಚ್ಚು (ಕೋಟಿ ರೂ.ನಲ್ಲಿ)
------------------------------------------------------------
ನಗರ ಪ್ರಕರಣ ವಂಚನೆ ಮೊತ್ತ ಜಪ್ತಿ ಮೊತ್ತ
----------------------------------------------------------------
ಬೆಂಗಳೂರು ನಗರ 480 42.41 3.63
ಮಂಗಳೂರು ನಗರ 24 84.59 2.62 ಲಕ್ಷ
ಮೈಸೂರು ನಗರ 21 5.57 19 ಲಕ್ಷ
ತುಮಕೂರು 13 1.73 00
====================================
ರಾಜ್ಯದಲ್ಲಿ ಒಟ್ಟು 641 109,01,44,133 9,45,71,214