ದೇಶದ 107 ಜನಪ್ರತಿನಿಧಿಗಳ ವಿರುದ್ಧ ದ್ವೇಷ ಭಾಷಣ ಕೇಸ್​!

EC
Published on

ನವದೆಹಲಿ: ದೇಶದಲ್ಲಿ 107 ಸಂಸದರು ಮತ್ತು ಶಾಸಕರ ವಿರುದ್ಧ ದ್ವೇಷ ಭಾಷಣ ಕೇಸ್​ಗಳು ನಡೆಯುತ್ತಿವೆ. ಇಂತಹ ಪ್ರಕರಣಗಳನ್ನು ಹೊಂದಿರುವ 480 ಅಭ್ಯರ್ಥಿಗಳು ಕಳೆದ ಐದು ವರ್ಷಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಅಸೋಸಿಯೇಷನ್​ ಫಾರ್​ ಡೆಮಾಕ್ರಟಿಕ್​ ರಿಫಾಮ್ಸ್​ರ್ (ಎಡಿಆರ್​) ತಿಳಿಸಿದೆ.

ಚುನಾವಣೆ ವೇಳೆ ಅಭ್ಯರ್ಥಿಗಳು ಸಲ್ಲಿಸಿದ ಪ್ರಮಾಣ ಪತ್ರಗಳನ್ನು ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಉತ್ತರ ಪ್ರದೇಶದ ಏಳು, ತಮಿಳುನಾಡಿನ ನಾಲ್ಕು, ಬಿಹಾರ, ಕರ್ನಾಟಕ ಮತ್ತು ತೆಲಂಗಾಣದ ತಲಾ ಮೂರು, ಅಸ್ಸಾಂ, ಗುಜರಾತ್​, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಿಂದ ತಲಾ ಇಬ್ಬರು ಮತ್ತು ಜಾರ್ಖಂಡ್​, ಮಧ್ಯಪ್ರದೇಶ, ಕೇರಳ, ಒಡಿಶಾ ಮತ್ತು ಪಂಜಾಬ್​ನ ತಲಾ ಒಬ್ಬ ಸಂಸದ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ದ್ವೇಷದ ಭಾಷಣ ಪ್ರಕರಣ ಎದುರಿಸುತ್ತಿರುವವರ ಪೈಕಿ 22 ಸಂಸದರು ಆಡಳಿತಾರೂಢ ಬಿಜೆಪಿ, ಇಬ್ಬರು ಕಾಂಗ್ರೆಸ್​ ಮತ್ತು ಎಎಪಿ, ಎಐಎಂಐಎಂ, ಎಐಯುಡಿಎಫ್​, ಡಿಎಂಕೆ, ಎಂಡಿಎಂಕೆ, ಪಿಎಂಕೆ, ಶಿವಸೇನೆ (ಎಎಪಿ)ಯಿಂದ ತಲಾ ಒಬ್ಬರು ಇದ್ದಾರೆ. 74 ಶಾಸಕರು ತಮ್ಮ ವಿರುದ್ಧ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net