

ನವದೆಹಲಿ: ದೇಶದ ಮೂಲಸೌಕರ್ಯ ಅಭಿವೃದ್ಧಿಯೊಂದಿಗೆ ಉದ್ಯೋಗಾವಕಾಶವನ್ನೂ ಸೃಷ್ಟಿಸುವ ಉದ್ದೇಶದೊಂದಿಗೆ 103 ಲಕ್ಷ ಕೋಟಿ ರೂ. ವೆಚ್ಚದ 6,500ಕ್ಕೂ ಅಧಿಕ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. ವಸತಿ, ಶುದ್ಧ ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಸಂಸ್ಥೆಗಳು, ರೈಲು, ವಿಮಾನ, ಬಸ್ ನಿಲ್ದಾಣಗಳು, ಉಗ್ರಾಣ ಹಾಗೂ ಮೆಟ್ರೋ, ನೀರಾವರಿ ಯೋಜನೆ. ಲಾಜಿಸ್ಟಿಕ್ ಸೇರಿ ವಿವಿಧ ಯೋಜನೆಗಳಿಗೆ ಈ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಪೈಕಿ ಹಲವು ಯೋಜನೆಗಳು 2019ರ ಡಿ.31ರಿಂದಲೇ ಆರಂಭಗೊಂಡಿದ್ದು, ರಾಷ್ಟ್ರೀಯ ಇನ್ಫ್ರಾಸ್ಟ್ರಕ್ಚರ್ ಪೈಪ್ಲೈನ್ (ಎನ್ಐಪಿ) ಶೀರ್ಷಿಕೆಯಲ್ಲಿ ಈಗಾಗಲೇ -ಠಿ; 22 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹೆದ್ದಾರಿಗೆ ಒತ್ತು
ಹೆದ್ದಾರಿಗಳ ತ್ವರಿತ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು 2,500 ಕಿ.ಮೀ. ಬಳಕೆ ನಿಯಂತ್ರಿತ ಹೆದ್ದಾರಿಗಳು, 9 ಸಾವಿರ ಕಿ.ಮೀ. ಆರ್ಥಿಕ ಕಾರಿಡಾರ್, 2 ಸಾವಿರ ಕಿ.ಮೀ. ಕರಾವಳಿ ಮತ್ತು ಬಂದರುಗಳಿಗೆ ಸಂರ್ಪಸುವ ರಸ್ತೆಗಳು ಹಾಗೂ 2 ಸಾವಿರ ಕಿ.ಮೀ. ಆಯಕಟ್ಟಿನ ಹೆದ್ದಾರಿ ಅಭಿವೃದ್ಧಿಯನ್ನು ಬಜೆಟ್ನಲ್ಲಿ ಘೋಷಿಸಿದೆ. ಎಲೆಕ್ಟ್ರಾನಿಕ್ ಟೋಲಿಂಗ್ ಅಡಿಯಲ್ಲಿ ಫಾಸ್ಟಾ್ಯಗ್ ಕಾರ್ಯವಿಧಾನದಿಂದ ರಾಷ್ಟ್ರೀಯ ಹೆದ್ದಾರಿಗಳು ವಾಣಿಜ್ಯೀಕರಣಗೊಳ್ಳಲಿದ್ದು, ಇದರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಹೆಚ್ಚಿನ ಸಂಪನ್ಮೂಲ ಹೊಂದಬಹುದಾಗಿದೆ. 2024ರೊಳಗೆ 6 ಸಾವಿರ ಕಿ.ಮೀ ಅಂತರದ 12 ಹೆದ್ದಾರಿ ಯೋಜನೆಗಳನ್ನು ಫಾಸ್ಟಾ್ಯಗ್ ವ್ಯಾಪ್ತಿಗೆ ತರುವ ಉದ್ದೇಶವಿದೆ ಎಂದು ಸಿಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.