

ನವದೆಹಲಿ: ನಿಜಾಮುದ್ದೀನ್ನ ಮರ್ಕಜ್ನಲ್ಲಿರುವ ತಬ್ಲಿಘಿ ಜಮಾತನಲ್ಲಿ ಪಾಲ್ಗೊಂಡಿದ್ದ 1,023 ಜನರಿಗೆ ಸೋಂಕು ಕಾಣಿಸಿಕೊಂಡಿರುವುದು ದೃಢವಾಗಿದೆ. ಆ ಮೂಲಕ ತಬ್ಲಿಘಿ ಜಮಾತ್ ದೇಶದಲ್ಲಿ ಕರೊನಾ ವೈರಸ್ನ ಹಾಟ್ಸ್ಪಾಟ್ ಎಂಬುದು ಸಾಬೀತಾದಂತಾಗಿದೆ.
ದೇಶದಲ್ಲಿ ಕೋವಿಡ್-19ಕ್ಕೆ ತುತ್ತಾದವರ ಸಂಖ್ಯೆ ಶನಿವಾರ ಸಂಜೆ ವೇಳೆಗೆ 2,902ಕ್ಕೆ ತಲುಪಿದೆ. ಈ ಪೈಕಿ ತಬ್ಲಿಘಿಯಲ್ಲಿ ಪಾಲ್ಗೊಂಡಿದ್ದ 1,023 ಜನರು ಸೇರಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದರರ್ಥ ಶೇ.30 ಪ್ರಕರಣಗಳು ತಬ್ಲಿಘಿಗೆ ಸಂಬಂಧಿಸಿದ್ದಾಗಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.
ತಬ್ಲಿಘಿ ಜಮಾತ್ನಲ್ಲಿ ಸಾವಿರಾರು ವಿದೇಶೀಯರು ಭಾಗಿಯಾಗಿದ್ದರು. ಅದರಲ್ಲೂ ಇಲ್ಲಿದ್ದವರನ್ನು ತಪಾಸಣೆಗೊಳಪಡಿಸಿ ಕ್ವಾರಂಟೈನ್ಗೆ ಕಳುಹಿಸಿದಾಗ 900ಕ್ಕೂ ಅಧಿಕ ವಿದೇಶಿಯರು ಜಮಾತ್ನಲ್ಲಿದ್ದದು ಕಂಡು ಬಂದಿದೆ.
17 ರಾಜ್ಯಗಳಿಗೆ ಸೋಂಕು: ದೆಹಲಿಯ ತಬ್ಲಿಘಿ ಜಮಾತ್ನಲ್ಲಿ ಬಹುತೇಕ ಎಲ್ಲ ರಾಜ್ಯಗಳ ಮುಸ್ಲಿಮರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜಮಾತ್ನಲ್ಲಿ ಪಾಲ್ಗೊಂಡು ಅವರವರ ರಾಜ್ಯಗಳಿಗೆ ಹಿಂದಿರುಗಿದವರ ಪೈಕಿ 17 ರಾಜ್ಯಗಳ ಜನರಲ್ಲಿ ಸೋಂಕು ವ್ಯಾಪಿಸಿದೆ. ಕೆಲ ರಾಜ್ಯಗಳಲ್ಲಿ ಜಮಾತ್ನಲ್ಲಿ ಪಾಲ್ಗೊಂಡಿದ್ದವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. (ಏಜೆನ್ಸೀಸ್)