2ನೇ ವಿಶ್ವಯುದ್ಧ ಕಾಲದ ವಿಮಾನ ಹಾರಿಸಿದ 102 ವರ್ಷದ ವೃದ್ಧ!

flaight 2
Published on

ಲಂಡನ್​: ಬ್ರಿಟನ್‌ ವಾಯುಪಡೆಯ ಮಾಜಿ ಸ್ಕ್ವಾಡ್ರನ್ 102 ವರ್ಷದ ಜ್ಯಾಕ್ ಹೆಮ್ಮಿಂಗ್ಸ್ ಸೋಮವಾರ 2ನೇ ಪ್ರಪಂಚ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ಅತ್ಯಂತ ನಂಬುಗೆಯ ಸ್ಪಿಟ್‌ಫೈರ್ ಯುದ್ಧ ವಿಮಾನವನ್ನು ಹಾರಿಸಿ ವಿಶ್ವದ ಗಮನ ಸೆಳೆದರು.

ದಕ್ಷಿಣ ಇಂಗ್ಲೆಂಡ್‌ನ ಏರ್‌ಫೀಲ್ಡ್‌ನಲ್ಲಿ ಜ್ಯಾಕ್ ಹೆಮಿಂಗ್ಸ್ನಿಂದ 20 ನಿಮಿಷ ವಿಮಾನ ಹಾರಾಟ ನಡೆಸಿದರು. ಲಂಡನ್ ಬಿಗಿನ್ ಹಿಲ್‌ನಲ್ಲಿರುವ ಹೆರಿಟೇಜ್ ಹ್ಯಾಂಗರ್‌ನಲ್ಲಿ ಅವರೇ ಸ್ಥಾಪಿಸಿದ್ದ ಮಿಲಿಟರಿ ಚಾರಿಟಿ ಮಿಷನ್ ಏವಿಯೇಷನ್ ​ಫೆಲೋಶಿಪ್ (ಎಂಎಎಫ್​) 80 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ವಿಮಾನವನ್ನು ಹಾರಿಸಿ ಗಮನಸೆಳೆದರು.

ಅನುಭವಿ ಜ್ಯಾಕ್ ಹೆಮ್ಮಿಂಗ್ಸ್ ಹಿಂದೆಂದೂ ಸ್ಪಿಟ್‌ಫೈರ್ ಅನ್ನು ಹಾರಿಸಿರಲಿಲ್ಲ. ಆದರೆ ಆಕಾಶದಲ್ಲಿ 20 ನಿಮಿಷ ಯಶಸ್ವಿಯಾಗಿ ಹಾರಾಟ ನಡೆಸಿ ಹಿಂತಿರುಗಿರುವುದು ಎಲ್ಲರ ಕಣ್ಣು ಹುಬ್ಬೇರಿಸುವಂತೆ ಮಾಡಿದೆ.

ಇದು "ಸಂಪೂರ್ಣವಾಗಿ ಸಂತೋಷಕರ" “ನಿಜ ಹೇಳಬೇಕೆಂದರೆ, ಅದು ಸ್ವಲ್ಪ ತುಕ್ಕು ಹಿಡಿದಂತೆ ಭಾಸವಾಯಿತು. ನಾನು ತುಕ್ಕು ಹಿಡಿದಿದ್ದರೂ ಆಶ್ಚರ್ಯವಿಲ್ಲ, ”ಎಂದುಎಂದು ಜ್ಯಾಕ್ ಹೆಮ್ಮಿಂಗ್ಸ್ ವಿಮಾನ ಹಾರಾಟದ ಬಳಿಕ ಹೇಳಿದರು.

ವಿಮಾನದಲ್ಲಿ ಹೆಮ್ಮಿಂಗ್ಸ್ ಜೊತೆಗಿದ್ದ ಪೈಲಟ್ ಬ್ಯಾರಿ ಹ್ಯೂಸ್, ಅನುಭವಿ. ಅವರಿಗೆ ನಿಜವಾಗಿಯೂ ಯಾವುದೇ ಸೂಚನೆಯ ಅಗತ್ಯವಿರಲಿಲ್ಲ. ಅವರು ನಿಯಂತ್ರಣ ಕಳೆದುಕೊಳ್ಳದೆ ವಿಮಾನ ಹಾರಾಟ ನಡೆಸಿದರು. ಕೆಲವು ತಿರುವುಗಳು ಮತ್ತು ಮೂಲಭೂತ ತಂತ್ರಗಳನ್ನು ಮಾಡಿದರು, ”ಹ್ಯೂಸ್ ಹೇಳಿದರು.

ಹೆಮ್ಮಿಂಗ್ಸ್ ಅವರು ಮಿಷನ್ ಏವಿಯೇಷನ್ ​ಫೆಲೋಶಿಪ್‌ಗಾಗಿ ಹಣವನ್ನು ಸಂಗ್ರಹಿಸುತ್ತಾರೆ. ಇದು 2ನೇ ಮಹಾಯುದ್ಧದ ಸಂದರ್ಭದಲ್ಲಿ ಸ್ಟುವರ್ಟ್ ಕಿಂಗ್ ಜೊತೆಗೆ ಸಂಸ್ಥೆ ಪ್ರಾರಂಭಿಸಿದ್ದರು. ಈ ಸಂಸ್ಥೆಯು ನಂತರ ಕ್ರಿಶ್ಚಿಯನ್ ಸಂಸ್ಥೆಯಾಗಿ ಬೆಳೆದಿದೆ, ಅದು ಅಗತ್ಯವಿರುವ ದೇಶಗಳಿಗೆ ಪರಿಹಾರ, ಔಷಧ ಮತ್ತು ತುರ್ತು ಸರಕುಗಳನ್ನು ವಿಮಾನಗಳ ಮೂಲಕ ತಲುಪಿಸುತ್ತದೆ.

ಜ್ಯಾಕ್ ಹೆಮ್ಮಿಂಗ್ಸ್, ಈ ಹಿಂದೆ ತನ್ನ 100ನೇ ಹುಟ್ಟುಹಬ್ಬದಂದು ಏರೋಬ್ಯಾಟಿಕ್ಸ್ ಪ್ರದರ್ಶಿಸಿದ್ದರು. ಇದೇ ಚಾರಿಟಿಗಾಗಿ 40,000 ಪೌಂಡ್‌ಗಳಿಗಿಂತ ಹೆಚ್ಚು ($50,000) ಸಂಗ್ರಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net