More

    100 ಬಿಲಿಯನ್ ಡಾಲರ್​ ಕ್ಲಬ್‌ಗೆ ಮರಳಿದ ಗೌತಮ್ ಅದಾನಿ!

    ಮುಂಬೈ: ಗೌತಮ್ ಅದಾನಿ ಸಮೂಹದ ಕಂಪನಿಗಳ ಷೇರುಗಳು ಕಳೆದ ಕೆಲವು ದಿನಗಳಿಂದ ಏರಿಕೆ ಕಂಡಿದ್ದು, ಅವರ ಆಸ್ತಿ ಮೌಲ್ಯ 100 ಬಿಲಿಯನ್ ಡಾಲರ್ ದಾಟಿದೆ. ಇದರೊಂದಿಗೆ ಅವರು 100 ಬಿಲಿಯನ್ ಡಾಲರ್​ ಕ್ಲಬ್‌ಗೆ ಸೇರ್ಪಡೆಯಾದರು.

    ಇದನ್ನೂ ಓದಿ:ಕೇಂದ್ರದಿಂದ ತಾರತಮ್ಯ ಆರೋಪ: ದೆಹಲಿಯಲ್ಲಿ ಸಿದ್ದರಾಮಯ್ಯ ಬಳಿಕ ಕೇರಳ ಸಿಎಂ ಪ್ರತಿಭಟನೆ..

    ಕಳೆದ ವರ್ಷ ಹಿಂಡೆನ್‌ಬರ್ಗ್ ವರದಿಯ ನಂತರ, ಅವರ ಸಂಪತ್ತು ತೀವ್ರವಾಗಿ ಕುಗ್ಗಿತ್ತು. ಆದರೀಗ ಅವರು $101 ಶತಕೋಟಿಯೊಂದಿಗೆ ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ. ಕಳೆದ ವಾರ, ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಭಾರಿ ಏರಿಕೆ ಕಂಡಿದ್ದವು. ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಶೇಕಡಾ 130 ರಷ್ಟು ಏರಿಕೆ ಕಂಡಿವೆ. ಈ ವಾರವೂ ಅದು ಮುಂದುವರಿದಿದೆ.

    ಗೌತಮ್ ಅದಾನಿ ಸಂಪತ್ತು 2022 ರಲ್ಲಿ ಗರಿಷ್ಟ ಎಂದರೆ 150 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿತ್ತು. ಆದರೆ ಯುಎಸ್ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ವರದಿಯ ನಂತರ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಭಾರೀ ಪ್ರಮಾಣದಲ್ಲಿ ಕುಸಿದವು.. ಅವರ ಸಂಪತ್ತು ಸುಮಾರು 37.7 ಬಿಲಿಯನ್ ಡಾಲರ್‌ಗಳಿಗೆ ಕುಸಿಯಿತು. ಅವರು ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ 25 ಬಿಲಿಯನೇರ್‌ಗಳಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು.

    ಹಿಂಡೆನ್‌ಬರ್ಗ್‌ನ ಆರೋಪಗಳನ್ನು ಅದಾನಿ ಗ್ರೂಪ್ ಬಲವಾಗಿ ನಿರಾಕರಿಸಿತು. ಸಾಲದ ಕಂತುಗಳನ್ನು ಮುಂಚಿತವಾಗಿಯೇ ಪಾವತಿಸಿತು. ಹೊಸದಾಗಿ ನಿಧಿ ಸಂಗ್ರಹಿಸಿತು. ಮತ್ತೊಂದೆಡೆ, ಸುಪ್ರೀಂ ಕೋರ್ಟ್ ನೇಮಿಸಿದ ತಜ್ಞರ ಸಮಿತಿಯು ತಮ್ಮ ತನಿಖೆಯಲ್ಲಿ ಹಿಂಡೆನ್‌ಬರ್ಗ್‌ನ ಆರೋಪಗಳಿಗೆ ಯಾವುದೇ ಪುರಾವೆಗಳಿಲ್ಲ ಎಂದು ತೀರ್ಪು ನೀಡಿತು.
    ಮತ್ತೊಂದೆಡೆ, ಸೆಬಿ ಇದೇ ವಿಷಯದ ಮೇಲೆ ಕೇಂದ್ರೀಕರಿಸಿದೆ ಮತ್ತು 22 ವಿಷಯಗಳ ತನಿಖೆಯನ್ನು ಪೂರ್ಣಗೊಳಿಸಿದೆ. ಇನ್ನೆರಡು ವಿಷಯಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಕಳೆದ ತಿಂಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಸೆಬಿ ತನಿಖೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿ ಎಸ್‌ಐಟಿ ತನಿಖೆಗೆ ಆದೇಶಿಸಿದೆ. ತನಿಖೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ಯಾವುದೇ ಹೆಚ್ಚುವರಿ ಕ್ರಮ ಅಗತ್ಯವಿಲ್ಲ ಎಂದು ತೀರ್ಮಾನಿಸಿತು. ಈ ಬೆಳವಣಿಗೆಗಳೊಂದಿಗೆ ಷೇರುಗಳು ಭಾರೀ ಪ್ರಮಾಣದಲ್ಲಿ ಏರಿಕೆ ಕಂಡವು.

    ಕರ್ನಾಟಕ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ ಎನ್​.ವಿ. ಅಂಜಾರಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts