ಚಿನ್ನದ ಬೆಲೆ ಸಾವಿರ ರೂ. ಏರಿಕೆ

golds
Published on

ನವದೆಹಲಿ: ಅಕ್ಷಯ ತೃತೀಯಾ ಹಿನ್ನೆಲೆಯಲ್ಲಿ ಖರೀದಿ ಹೆಚ್ಚಿದ್ದರಿಂದ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಚಿನ್ನದ ಬೆಲೆ 1,050 ರೂ. ಏರಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.

ಶೇ. 99.9ರಷ್ಟು ಶುದ್ಧತೆಯ ಚಿನ್ನ ಸೋಮವಾರ 10 ಗ್ರಾಂಗೆ 98,400 ರೂ. ಇದ್ದದ್ದು ಮಂಗಳವಾರ 99,450 ರೂ.ಗೆ ಏರಿತು. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಸೋಮವಾರ 97,900 ರೂ. ಇದ್ದದ್ದು ಮಂಗಳವಾರ 1,100 ರೂ.ನಷ್ಟು ಏರಿಕೆಯಾಗಿ 99,000 ರೂ. ಆಯಿತು.

ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಇಲ್ಲಿಯವರೆಗೆ ಚಿನ್ನದ ಬೆಲೆ 20,500 ರೂ. (ಶೇ. 26) ಏರಿಕೆಯಾಗಿದೆ. ಕಳೆದ ವರ್ಷದ ಡಿ. 31ರಂದು 78,950 ರೂ. ಇತ್ತು. ಇದೇ ವೇಳೆ, ಬೆಳ್ಳಿಯ ಬೆಲೆ ಮಂಗಳವಾರ 3,500 ರೂ.ನಷ್ಟು ಏರಿಕೆಯಾಗಿ, ಕೆಜಿಗೆ 1,02,000 ರೂ. ಆಗಿದೆ. ಸೋಮವಾರ ಇದು 98,500 ರೂ. ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net