ಪೋಷಕತ್ವದ ಬಗ್ಗೆ ತಿಳಿಸುವ '1000 ಡೇಸ್ ದಟ್ ಶೇಪ್ ಎ ಲೈಫ್‌ಟೈಮ್' ಪುಸ್ತಕ ಬಿಡುಗಡೆ! Book launched

book launched
Published on

Book launched : ಹುಟ್ಟಿನಿಂದ 3 ವರ್ಷದ ಮಕ್ಕಳ ಪೋಷಕತ್ವದ ಬಗ್ಗೆ ಮಾಹಿತಿ ನೀಡುವ '1000 ಡೇಸ್ ದಟ್ ಶೇಪ್ ಎ ಲೈಫ್‌ಟೈಮ್' ಎಂಬ ಶೀರ್ಷಿಕೆಯುಳ್ಳ ಪುಸ್ತಕವನ್ನು ಮುಂಬೈನ ಬಾಂದ್ರಾದಲ್ಲಿರುವ ನಟಿ ಮಲೈಕಾ ಅರೋರ ಅವರ ರೆಸ್ಟೋರೆಂಟ್​ನ ಸ್ಕಾರ್ಲೆಟ್ ಹೌಸ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಗೌರವ ಅಥಿತಿಯಾಗಿ ನಿವೃತ್ತ ಐಪಿಎಸ್​ ಅಧಿಕಾರಿ ನವಾಬ್ ಫಕೀರುಲ್ ಹಕ್ ಭಾಗವಹಿಸಿದ್ದರು.

ಈ ಪುಸ್ತಕವನ್ನು ಹಿರಿಯ ಮಕ್ಕಳ ಮನಶಾಸ್ತ್ರಜ್ಞೆ ಸೈದಾ ಫರ್ಹೀನ್ ಅಲಂ ಹಕ್ ಅವರು ಬರೆದಿದ್ದಾರೆ. ಚಿಕ್ಕ ಮಕ್ಕಳ ಬೆಳವಣಿಗೆಯನ್ನು ಕೇಂದ್ರ ಬಿಂದುವಾಗಿಸಿಕೊಂಡು ಪುಸ್ತಕ ರಚನೆ ಮಾಡಲಾಗಿದೆ. ಈ ಪುಸ್ತಕವು ಮಕ್ಕಳ ದೈಹಿಕ, ಭಾವನಾತ್ಮಕ, ಸರಳ ಸಾಮಾಜಿಕ ಬೆಳವಣಿಗೆ, ಅರಿವು ಹಾಗೂ ಪ್ರಾಯೋಗಿಕ ತಂತ್ರಗಳನ್ನು ಒಳಗೊಂಡಿದೆ. ಇದು ಮಗುವಿನ ಆರಂಭಿಕ ವರ್ಷಗಳನ್ನು ಅತ್ಮವಿಶ್ವಾಸದಿಂದ ರೂಪಿಸಲು ಪೋಷಕರಿಗೆ ಸಹಾಯ ಮಾಡಲು ಒಂದು ತಂತ್ರವಾಗಿದ್ದು, ಮಕ್ಕಳ ಬೆಳವಣಿಗೆಗೆ ಸೂಕ್ತವಾದ ಸಾಧನವಾಗಿ ಪರಿಚಯವಾಗುತ್ತಿದೆ.

'1000 ಡೇಸ್ ದಟ್ ಶೇಪ್ ಎ ಲೈಫ್‌ಟೈಮ್' ಪುಸ್ತಕವು ಜಾಗತಿಕವಾಗಿ ಪ್ರಚಾರವಾಗಲಿದ್ದು, ಯುಕೆ, ಯುಎಸ್​, ಜರ್ಮನಿ, ಆಸ್ಟ್ರೇಲಿಯ, ಸ್ಪೇನ್​ ಸೇರಿದಂತೆ ಕೆಲವೊಂದು ದೇಶಗಳಲ್ಲಿ ಈ ಪುಸ್ತಕ ಸಿಗಲಿದೆ. ಇನ್ನು ಭಾರತದಲ್ಲಿ ಫ್ಲಿಪ್​ಕಾರ್ಟ್​ನಂತಹ ಆ್ಯಪ್​ಗಳಲ್ಲಿ ಈ ಪುಸ್ತಕ ದೊರೆಯಲಿದ್ದು, ಬೇರೆ ದೇಶಗಳಲ್ಲಿ ಅಮೆಜಾನ್​ ಮೂಲಕ ದೊರೆಯುತ್ತದೆ.

ಬಾಲ್ಯದ ಅನುಭವವನ್ನು ಅನುಸರಿಸಲು, ಆಧುನಿಕ ಪೋಷಕರಿಗೆ ಈ ಪುಸ್ತಕವು ವಿಶ್ವಾಸಾರ್ಹ ಒಡನಾಡಿಯಾಗಲು ಸಜ್ಜಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net