132 ಸರ್ಕಾರಿ ಶಾಲೆಗಳಿಗೆ ಶೇ.100 ರಿಸಲ್ಟ್

ddpi office
ಶಿವಮೊಗ್ಗ ಡಿಡಿಪಿಪೈ ಕಚೇರಿ
Published on

ಶಿವಮೊಗ್ಗ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಗರ ಹಾಗೂ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗಿಂತಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಪರೀಕ್ಷೆ ಎದುರಿಸಿದ ಗ್ರಾಮೀಣ ಭಾಗದ 13,299 ವಿದ್ಯಾರ್ಥಿಗಳ ಪೈಕಿ 12,016 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ 9,729 ವಿದ್ಯಾರ್ಥಿಗಳ ಪರೀಕ್ಷೆ ಎದುರಿಸಿದ್ದರು. ಇದರಲ್ಲಿ 8,404 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಒಂದೆಡೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆ ಅತ್ಯುತ್ತಮವಾಗಿದ್ದರೆ ಸರ್ಕಾರಿ ಶಾಲೆಯ ಸಾಧನೆಯೂ ಉತ್ತಮವಾಗಿದೆ.
ಭದ್ರಾವತಿ ತಾಲೂಕಿನ 19 ಶಾಲೆಗಳು, ಹೊಸನಗರ ತಾಲೂಕಿನಲ್ಲಿ 19, ಸಾಗರ ತಾಲೂಕಿನಲ್ಲಿ 18, ಶಿಕಾರಿಪುರ ತಾಲೂಕಿನ 27, ಸೊರಬ ಹಾಗೂ ಶಿವಮೊಗ್ಗದ ತಾಲೂಕಿನ ತಲಾ 15, ತೀರ್ಥಹಳ್ಳಿ ತಾಲೂಕಿನಲ್ಲಿ 13 ಶಾಲೆ ಸೇರಿದಂತೆ ಒಟ್ಟು 132 ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ.
ತೀರ್ಥಹಳ್ಳಿ ಪ್ರಥಮ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೀರ್ಥಹಳ್ಳಿ ತಾಲೂಕು ಶೇ.94.24 ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಭದ್ರಾವತಿ ತಾಲೂಕು ಶೇ.83.87 ಫಲಿತಾಂಶದೊಂದಿಗೆ ಕಡೇ ಸ್ಥಾನದಲ್ಲಿದೆ. ಸೊರಬ ಶೇ.92.79, ಹೊಸನಗರ ಶೇ.92.66, ಸಾಗರ ತಾಲೂಕು ಶೇ.92.37, ಶಿಕಾರಿಪುರ ಶೇ.90.34, ಶಿವಮೊಗ್ಗ ತಾಲೂಕು ಶೇ.85.56 ಫಲಿತಾಂಶ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net