ರಷ್ಯಾ-ಉಕ್ರೇನ್​ ಯುದ್ಧ; 100ಕ್ಕೂ ಅಧಿಕ ಉತ್ತರ ಕೊರಿಯನ್​ ಸೈನಿಕರು ಮೃತ್ಯು: ದಕ್ಷಿಣ ಕೊರಿಯಾ | North Korea

ವಿಜಯವಾಣಿ - 2024-12-19T152123.396
Published on

North Korean Soldiers: ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ಮುಂದುವರೆದಿದ್ದು, ರಷ್ಯಾ ಪರ ಹೋರಾಡಿದ ಉತ್ತರ ಕೊರಿಯಾದ 100ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿರುವುದಾಗಿ ದಕ್ಷಿಣ ಕೊರಿಯಾದ ಶಾಸಕ ಲೀ ಸಿಯೊಂಗ್-ಕ್ವೆನ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಈ ತಿಂಗಳಲ್ಲಿ ರಷ್ಯಾಗೆ ತೆರಳಿದ್ದ ಸೈನಿಕರು, ಉಕ್ರೇನ್ ವಿರುದ್ಧ ರಷ್ಯಾಕ್ಕಾಗಿ ಹೋರಾಡುವ ವೇಳೆ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.

"ಡಿಸೆಂಬರ್‌ನಲ್ಲಿ ಉತ್ತರ ಕೊರಿಯಾದ ಪಡೆಗಳು ರಷ್ಯಾ ವಿರುದ್ಧದ ಯುದ್ಧದಲ್ಲಿ ತೊಡಗಿದ್ದರು. ಈ ಸಮಯದಲ್ಲಿ ಕನಿಷ್ಠ 100 ಸಾವು ಸಂಭವಿಸಿವೆ" ಎಂದು ಲೀ ಹೇಳಿದರು. ಉಕ್ರೇನ್​ ವಿರುದ್ಧದ ಸಮರದಲ್ಲಿ ರಷ್ಯಾ ತನ್ನ ಸಹಾಯಕ್ಕಾಗಿ ಸುಮಾರು 10,000 ಉತ್ತರ ಕೊರಿಯಾದ ಸೈನಿಕರನ್ನು ನೇಮಿಸಿಕೊಂಡಿತ್ತು. ಆದರೆ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ತಮ್ಮ ಸೈನಿಕರು ಮೃತಪಟ್ಟ ವಿಷಯವನ್ನು ದಕ್ಷಿಣ ಕೊರಿಯಾ ಪ್ರಸ್ತಾಪಿಸಿದೆ.

"ಯುದ್ಧದಲ್ಲಿ ಗಾಯಗೊಂಡವರ ಸಂಖ್ಯೆ ಸುಮಾರು 1,000 ಗಡಿದಾಟುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಗುಪ್ತಚರ ಸೇವೆ ವರದಿ ಮಾಡಿದೆ. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್, ಯುದ್ಧದಲ್ಲಿ ತಮ್ಮ ಸೈನಿಕರ ಸಾವಿನ ಸಂಖ್ಯೆಯನ್ನು ಲೆಕ್ಕಿಸದೆ ರಷ್ಯಾದಲ್ಲಿ ಉಂಟಾದ ನಷ್ಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದರೂ ಹೊಸ ವಿಶೇಷ ಕಾರ್ಯಾಚರಣೆ ಪಡೆಗೆ ತರಬೇತಿ ನೀಡಲು ಸಕಲ ತಯಾರಿಗೆ ಮುಂದಾಗಿದ್ದಾರೆ" ಎಂದು ಲೀ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net