ಹೆಚ್ಚುತ್ತಿದೆ ಕರೊನಾದಿಂದ ಮುಕ್ತರಾಗಿ ಡಿಸ್​ಚಾರ್ಜ್​ ಆಗುತ್ತಿರುವವರ ಸಂಖ್ಯೆ: ಇಂದು 100 ಸೋಂಕಿತರು ಸಾವು

Covid 19
Published on

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 5619 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 5407 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಹಾಗೇ 100 ಮಂದಿ ಸಾವನ್ನಪ್ಪಿದ್ದಾರೆ.

ಅಲ್ಲಿಗೆ ಪ್ರತಿದಿನ ಡಿಸ್​ಚಾರ್ಜ್​ ಆಗುವವರ ಸಂಖ್ಯೆ ಹಾಗೂ ಪತ್ತೆಯಾಗುವ ಹೊಸ ಪ್ರಕರಣಗಳ ಸಂಖ್ಯೆ ಬಹುತೇಕ ಸಮವಾಗಿರುತ್ತಿದೆ.

ರಾಜ್ಯದಲ್ಲಿ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 1,51,449ಕ್ಕೆ ಏರಿಕೆಯಾಗಿದೆ. ಡಿಸ್​ಚಾರ್ಜ್​ ಆದವರು 74,679. ಹಾಗೇ ಮೃತಪಟ್ಟವರ ಒಟ್ಟು ಸಂಖ್ಯೆ 2804. ಸಕ್ರಿಯ ಪ್ರಕರಣಗಳು 73,958 ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ? ಮೃತಪಟ್ಟವರು ಎಷ್ಟು ಮಂದಿ? ಇಲ್ಲಿದೆ ನೋಡಿ ವಿವರ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net