ಜಮ್ಮುವಿನಲ್ಲಿ ಬಾಲಾಜಿ ಮಂದಿರ ನಿರ್ಮಾಣಕ್ಕೆ 100 ಎಕರೆ ಜಮೀನು

Balaji
Published on

ಹೈದರಾಬಾದ್: ತಿರುಪತಿ ತಿರುಮಲದ ಶ್ರೀವೆಂಕಟೇಶ್ವರಸ್ವಾಮಿ ದೇಗುಲದ ಮಾದರಿಯಲ್ಲೇ ದೇವಸ್ಥಾನ ನಿರ್ವಿುಸಲು 100 ಎಕರೆ ಭೂಮಿ ನೀಡುವುದಾಗಿ ಜಮ್ಮು-ಕಾಶ್ಮೀರದ ಆಡಳಿತ ತಿಳಿಸಿದೆ. ಶ್ರೀ ಬಾಲಾಜಿಯ ಭವ್ಯ ಮಂದಿರಕ್ಕಾಗಿ ಜಮ್ಮುವಿನ ಏಳು ಕಡೆ ಸ್ಥಳ ನೋಡಿದ್ದು, ತಿರುಪತಿ ತಿರುಮಲ ದೇವಸ್ಥಾನ ಮಂಡಳಿ (ಟಿಟಿಡಿ) ಮತ್ತು ಜಮ್ಮು- ಕಾಶ್ಮೀರದ ಆಡಳಿತ ಜಂಟಿಯಾಗಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಲಿವೆ ಎಂದು ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ತಿಳಿಸಿದ್ದಾರೆ.

ಜಮ್ಮು-ಕಟ್ರಾ ಹೆದ್ದಾರಿ ಬಳಿಯ ಜಾಗ ದೇವಾಲಯ ನಿರ್ವಣಕ್ಕೆ ಅನುಕೂಲಕರವಾಗಿದೆ ಎಂದು ಜಮ್ಮು- ಕಾಶ್ಮೀರ ಆಡಳಿತದ ಅಭಿಪ್ರಾಯವಾಗಿದೆ ಎಂದು ಮೂಲಗಳು ತಿಳಿಸಿವೆ. 100 ಎಕರೆಯಲ್ಲಿ ಭವ್ಯ ಮಂದಿರದ ಜತೆಗೆ ವೇದಪಾಠ ಶಾಲೆ, ಆಸ್ಪತ್ರೆ ಇನ್ನೆರಡು ವರ್ಷದಲ್ಲಿ ನಿರ್ವಣವಾಗಲಿದೆ. ಈ ಯೋಜನೆ ಕುರಿತ ವಿವರವನ್ನು ಟಿಟಿಡಿ ಅಧಿಕಾರಿಗಳು ಅಲ್ಲಿನ ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದಾರೆ. ಕಾಶ್ಮೀರ ಹೊರತಾಗಿ ಉತ್ತರ ಭಾರತದ ಇನ್ನೊಂದು ಕಡೆ ತಿಮ್ಮಪ್ಪನ ದೇವಾಲಯ ನಿರ್ಮಾಣ ಆಗಲಿದೆ. ಕುರುಕ್ಷೇತ್ರದಲ್ಲಿ ವೇದಪಾಠ ಶಾಲೆ ನಿರ್ವಿುಸುವಂತೆ ಪ್ರಸ್ತಾವ ಬಂದಿದೆ ಎಂದು ಟಿಟಿಡಿ ಮಂಡಳಿ ಸದಸ್ಯ ಪುಟ್ಟ ಪ್ರತಾಪ ರೆಡ್ಡಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net