ನಿಪ್ಪಾಣಿ: ತ್ರಿಪುರಾರಿ ಹುಣ್ಣಿಮೆ ಅಂಗವಾಗಿ ಇಲ್ಲಿನ ಮಹಾದೇವ ಗಲ್ಲಿಯ ಮಹಾದೇವ ಮಂದಿರದಲ್ಲಿ ಮಹಾದೀಪೋತ್ಸವ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು. ಭಕ್ತರು ಸುಮಾರು 10 ಸಾವಿರ ದೀಪ ಬೆಳಗಿಸಿ ಭಕ್ತಿ ಮೆರೆದರು.
ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ದಾದಾರಾಜೆ ನಿಪ್ಪಾಣಕರ ಸರಕಾರ ಮತ್ತು ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ ಕಾರ್ತಿಕ ಸ್ವಾಮಿ ಪ್ರತಿಮೆಗೆ ಪೂಜೆ ಸಲ್ಲಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ಪ್ರತಿ ವರ್ಷದಂತೆ ಚಿಕ್ಕೋಡಿಯ ರಾಜು ನೇರ್ಲಿ ಮತ್ತು ಸಂತೋಷ ಯಮಕನಮರಡಿ ಅವರು, ಬೃಹತ್ ಆಕಾರದ ಚಿತ್ತಾಕರ್ಷಕ ರಂಗೋಲಿ ಬಿಡಿಸಿದ್ದರು. ಅದರ ಸುತ್ತಮುತ್ತ ಗಣ್ಯರು, ಭಕ್ತರು ದೀಪ ಬೆಳಗಿಸಿದರು.
ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ ಮಾತನಾಡಿ, ವರ್ಷಗಳಿಂದ ಗಣೇಶ ಮಂಡಳ, ಮಹಾದೇವ ಪಲ್ಲಕ್ಕಿ ಭಕ್ತ ಮಂಡಳ, ಮಹಾದೇವ ಲಘು ರುದ್ರಾಭಿಷೇಕ, ಉತ್ಸವ ಮಂಡಳ, ದೇವಸ್ಥಾನ ಟ್ರಸ್ಟ್ ಮಂಡಳ, ನೀಲಾಂಬಿಕಾ ಮಹಿಳಾ ಮಂಡಳ ಮತ್ತು ವೀರಶೈವ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಗಳ ಸಹಯೋಗದಿಂದ ಮಹಾದೀಪೋತ್ಸವ ಆಚರಿಸಲಾಗುತ್ತಿದೆ. ಪ್ರತಿವರ್ಷ ಭಕ್ತರಿಂದ ಸುಮಾರು 10 ಸಾವಿರಕ್ಕೂ ಅಧಿಕ ದೀಪ ಪ್ರಜ್ವಲಿಸಲಾಗುತ್ತದೆ ಎಂದರು.
ಮಹಾದೇವ ಮಂದಿರ ಟ್ರಸ್ಟ್ ಚೇರ್ಮನ್ ಪ್ರವೀಣ ಬಾಗೇವಾಡಿ, ವಿಎಸ್‌ಎಂ ವೈಸ್-ಚೇರ್ಮನ್ ಆರ್.ವೈ.ಪಾಟೀಲ, ಸಂಚಾಲಕ ಸಂಜಯ ಮೊಳವಾಡೆ, ಗಣೇಶ ಖಡೇದ, ರವೀಂದ್ರ ಶೆಟ್ಟಿ, ಸಿಪಿಐ ಸಂಗಮೇಶ ಶಿವಯೋಗಿ, ವಜ್ರಕಾಂತ ಸದಲಗೆ, ಬಾಬಾಸಾಹೇಬ ಚಂದ್ರಕುಡೆ, ಮಲ್ಲಿಕಾರ್ಜುನ ಗಡಕರಿ, ರವಿ ಚಂದ್ರಕುಡೆ ಇದ್ದರು.