10 ಪ್ರತ್ಯೇಕ ಪ್ರಕರಣಗಳಡಿ 15 ಆರೋಪಿಗಳು ಅಂದರ್

ctd 2 crime (1).jpg NNN
Published on

ಚಿತ್ರದುರ್ಗ: ವಂಚನೆ,ಕಳವು ಮತ್ತಿತರ 10 ಪ್ರಕರಣಗಳಿಗೆ ಸಂಬಂಧಿಸಿ 15 ಆರೋಪಿಗಳನ್ನು ಪೊಲೀಸರು ಬಂಧಿಸಿ,ನಗದು ಸೇರಿದಂತೆ ಅಂದಾಜು 60 ಲಕ್ಷ ರೂ.ಮೌಲ್ಯದ ವಾಹನ,ಮೊಬೈಲ್‌ಗಳ ಇತ್ಯಾದಿ ವಶಪಡಿಸಿಕೊಂಡಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಜಿ.ರಾಧಿಕಾ ಈ ಪ್ರಕರಣಗಳಡಿ ಇನ್ನು ಹಲವರನ್ನು ಬಂಧಿಸ ಬೇಕಾಗಿದೆ ಎಂದರು.
ರೈಸ್‌ಫುಲ್ಲಿಂಗ್,ಡಬ್ಲಿಂಗ್,ಹಳೆ ನೋಟು ಬದಲಾವಣೆ,ವಿದೇಶಿ ಕರೆನ್ಸಿ ಹೆಸರಲ್ಲಿ ವಂಚಿಸುತ್ತಿದ್ದ ಮಹಿಳೆ ಸೇರಿ ದಂತೆ ಹಾಸನದ ಒಬ್ಬ ಹಾಗೂ ಮಹಾರಾಷ್ಟ್ರದ ಐವರು ಸಹಿತ ಆರು ಮಂದಿಯನ್ನು ಹೊಳಲ್ಕೆರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹಾಸನ ಜಿಜಿ ಕೊಪ್ಪಲಿ ನ ಮಧುಸೂದನ್ ಗೌಡ(30),ಮುಂಬಯಿನ ಸುರೇಶ್ ಎ ಶಿಂಧೆ(40),ಕೊಲ್ಲಾ ಪುರದ ದಿನೇಶ್‌ಮೋಹನ್‌ಚನ್ನವೀರ್(33),ನೀತಾ ಗಾಯಕ್‌ವಾಡ್(38)ಉಲ್ಲಾಸ ನಗರದ ರಾಜೇಂದ್ರ ಭಾಸ್ಕರ್‌ವಾಘ್(42)ಎಂದು ಗುರುತಿಸಿದ್ದು,2 ಕಾರು,9 ಮೊಬೈಲ್ ವಶಕ್ಕೆ ಪಡೆಯ ಲಾಗಿದೆ. ಹೊಳಲ್ಕೆರೆ ಬಳಿ ಪರಸ್ಪರ ವಾಗ್ವಾದಲ್ಲಿದ್ದ ಆರೋಪಿಗಳ ಕಾರು ತಪಾಸಣೆ ಮಾಡಿದಾಗ 23,83,600 ರೂ.ನಗದು ಸಿಕ್ಕಿದೆ.
ಚಳ್ಳಕೆರೆ ಪೊಲೀಸರು ಬೈಕ್,ಕುರಿ ಕಳವು ಪ್ರಕರಣಗಳಡಿ ಅಪ್ರಾಪ್ತ ಸಹಿತ ನಾಲ್ವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಕಳೆದ 2 ತಿಂಗಳಲ್ಲಿ ಚಳ್ಳಕೆರೆ ಠಾಣೆ ವ್ಯಾಪ್ತಿ ಸಾರ್ವಜನಿಕರು ಕಳೆದುಕೊಂಡಿದ್ದ 5 ಲಕ್ಷ ರೂ.ಮೌಲ್ಯದ 25 ಮೊಬೈಲ್‌ಗಳನ್ನೂ ಪತ್ತೆ ಮಾಡಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಹಾಗೂ ಭರಮಸಾಗರ ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ 5ಲಕ್ಷ ರೂ.ಮೌಲ್ಯದ 180 ಕ್ವಿಂಟಾಲ್ ಅನ್ನ ಭಾಗ್ಯದ ಅಕ್ಕಿ ಹಾಗೂ 40 ಲಕ್ಷ ರೂ,ಮೌಲ್ಯದ ಮೂರು ಕ್ಯಾಂಟರ್‌ಗಳನ್ನು ವಶಕ್ಕೆ ಪಡೆದು, ಚಾಲಕರಾದ ಸುರೇಶ್,ಚಾಲಕರಾದ ಉಜ್ಜಣ್ಣರ ಬಸವರಾಜ, ಗಜಾಪುರದ ಕರಿಬಸಜ್ಜನನ್ನು ಬಂಧಿಸಲಾಗಿದೆ. ತುರುವನೂರು ಠಾಣೆ ಕಳವು ಪ್ರಕರಣದಡಿ ಮೂವರನ್ನು ಬಂಧಿಸಲಾಗಿದೆ ಎಂದರು. ಎಎಸ್ಪಿ ಎಂಬಿ ನಂದಗಾವಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net