

ಆಟವಾಡುತ್ತಿದ್ದಾಗ ಹೃದಯಾಘಾತದಿಂದ 10 ವರ್ಷದ ಬಾಲಕ ಮೃತಪಟ್ಟಿರುವ ದುರಂತ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಕೊಲ್ಲಾಪುರ ಜಿಲ್ಲೆಯ ಕೊಡೋಲಿ ಗ್ರಾಮದ ಶ್ರವಣ್ ಗಾವಡೆ(10) ಎಂದು ಗುರುತಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಆಟವಾಡುವಾಗ ಹುಡುಗನಿಗೆ ಅಸ್ವಸ್ಥತೆ ಉಂಟಾಗಿ ಮನೆಗೆ ಹಿಂತಿರುಗಿ ತಾಯಿಯ ಮಡಿಲಲ್ಲಿ ಮಲಗಿದ್ದ. ನಂತರ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಇನ್ನು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಪೆಂಡಾಲ್ ಕೆಳಗೆ ಡ್ಯಾನ್ಸ್ ಮಾಡುವ ವೇಳೆ ಈ ಘಟನೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)