ಮಾವನೊಂದಿಗೆ ಕಲ್ಲು ತರಲು ಕ್ರಷರ್​ಗೆ ಹೋಗಿದ್ದ 10 ವರ್ಷದ ಬಾಲಕನ ಜೀವವೇ ಹೋಯ್ತು...

Died 19 May 20
Published on

ಚಿಕ್ಕೋಡಿ: ಕ್ರಷರ್​ನಲ್ಲಿ ಕಲ್ಲು ಸಿಡಿದು ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯ ಹೊರವಲಯದಲ್ಲಿ ನಡೆದಿದೆ.

ನಂಗಗಾಂವ್​ ಗ್ರಾಮದ ಮಹಾವೀರ ನಾಗನೂರ (10) ಮೃತ ಬಾಲಕ. ಈತ ತನ್ನ ಮಾವನೊಂದಿಗೆ ಟ್ರ್ಯಾಕ್ಟರ್​​ನಲ್ಲಿ ಕಲ್ಲು ತರಲೆಂದು ಬುಟಾಳಿ ಕ್ರಷರ್​ ಘಟಕಕ್ಕೆ ಹೋಗಿದ್ದ. ಈ ವೇಳೆ ಅಲ್ಲಿ ಕೆಲವರು ಕಲ್ಲು ಬ್ಲಾಸ್ಟ್ ಮಾಡುತ್ತಿದ್ದರು. ಬಾಲಕ ಮತ್ತು ಆತನ ಮಾವ ಅಲ್ಲಿಯೇ ಇದ್ದ ಸಂದರ್ಭದಲ್ಲಿ ಕಲ್ಲು ಸ್ಫೋಟಿಸಿದೆ. ತುಂಡಾದ ಕಲ್ಲು ಬಾಲಕನಿಗೆ ಬಡಿದು ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ದುರ್ಘಟನೆ ನಡೆಯುತ್ತಿದ್ದಂತೆ ಕ್ರಷರ್​ ಸಿಬ್ಬಂದಿ, ಕಲ್ಲು ಸಿಡಿಸಿದ ಕಾರ್ಮಿಕ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಥಣಿ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net