ಅಧಿಕಾರಿಗಳ ಬಳಿ ಆದಾಯಕ್ಕಿಂತ 10 ಪಟ್ಟು ಹೆಚ್ಚು ಆಸ್ತಿ!

Raid
Published on

ಬೆಂಗಳೂರು: ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ಸೇರಿದ 6 ಸ್ಥಳಗಳ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು, 2.9 ಕೆ.ಜಿ ಚಿನ್ನಾಭರಣ, 14 ಲಕ್ಷ ನಗದು ಹಾಗೂ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಿದ್ದಾರೆ. ಆದಾಯಕ್ಕಿಂತ 10 ಪಟ್ಟು ಅಧಿಕ ಪ್ರಮಾಣದಲ್ಲಿ ಆಸ್ತಿ ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಕೊಳಚೆ ನಿಮೂಲನಾ ಅಭಿವೃದ್ಧಿ ಮಂಡಳಿ ಹುದ್ದೆಗೆ ವರ್ಗಾವಣೆ ಆದೇಶದಲ್ಲಿರುವ ಎಂ.ಎಸ್. ನಿರಂಜನ್ ಬಾಬು, ಮೈಸೂರು ಬಿಬಿಎಂಪಿ ವಲಯ-6ರ ಅಭಿವೃದ್ಧಿ ಅಧಿಕಾರಿ ಎಚ್.ನಾಗರಾಜು ನಿವಾಸ, ಕಚೇರಿ, ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಲಾಗಿದೆ.

ಕೆಜಿ ಕೆಜಿ ಚಿನ್ನ-ಬೆಳ್ಳಿ: ತುಮಕೂರಿನ ಶೆಟ್ಟಿಹಳ್ಳಿಯ ಮಾರುತಿನಗರದಲ್ಲಿ ಎಂ.ಎಸ್. ನಿರಂಜನ್ ಬಾಬು ವಾಸಿಸುತ್ತಿದ್ದ ಮನೆ ಹಾಗೂ ಯಶವಂತಪುರದ ಗೋಲ್ಡನ್ ಗ್ರಾ್ಯಂಡ್ ಅಪಾರ್ಟ್​ವೆುಂಟ್​ನಲ್ಲಿರುವ ಇವರ ಸ್ನೇಹಿತನ ಪ್ಲಾ್ಯಟ್ ಮೇಲೆ ದಾಳಿ ನಡೆಸಲಾಗಿದ್ದು, 1.5 ಕೆ.ಜಿ ಚಿನ್ನಾಭರಣ, 5 ಲಕ್ಷ ನಗದು. ಕೆಜಿಗಟ್ಟಲೆ ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.  ಇದನ್ನೂ ಓದಿ: ರಾಜಧಾನಿಯಲ್ಲಿ ಸಜ್ಜಾಯ್ತು ಇನ್ನೊಂದು ಕೋವಿಡ್​ ಆಸ್ಪತ್ರೆ; ಇನ್ಫೋಸಿಸ್​, ವಿಪ್ರೋ ನೆರವು

ಕಾರುಗಳು, ಬೆಂಗಳೂರಿನ ಹಲವೆಡೆ  ಪ್ಲ್ಯಾಟ್​ಗಳು ಸೇರಿ ರಾಜ್ಯದ 10 ಕಡೆ ಆಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆ ಪತ್ತೆಯಾಗಿವೆ. ಹಾರ್ಡ್ ಡಿಸ್ಕ್, ಪ್ರಿಂಟರ್ ಸೇರಿ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಮೂಲಗಳ ಪ್ರಕಾರ ಆದಾಯಕ್ಕಿಂತ 1:20 ಅಧಿಕ ಆಸ್ತಿ ಹೊಂದಿದ್ದರು ಎನ್ನಲಾಗಿದೆ. ಇವರ ಸ್ನೇಹಿತನ ಮನೆಯಲ್ಲೂ ಸಾಕಷ್ಟು ದಾಖಲೆ ಜಪ್ತಿ ಮಾಡಿಕೊಳ್ಳಲಾಗಿದೆ.

ಬಿಡಿಎ ಉಪ ಕಾರ್ಯದರ್ಶಿಯಾಗಿದ್ದ ನಿರಂಜನ್ ಬಾಬು ಅವರನ್ನು ಬೆಂಗಳೂರು ಕೊಳಚೆ ನಿಮೂಲನಾ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಆದೇಶ ಹೊರಡಿಸಿ ಕೆಲ ದಿನ ಕಳೆದರೂ ಇನ್ನೂ ಅಧಿಕಾರ ಸ್ವೀಕರಿಸಿರಲಿಲ್ಲ. ಬಿಡಿಎಯಲ್ಲೇ ಮುಂದುವರೆಯಲು ಅವಕಾಶ ನೀಡುವಂತೆ ಪ್ರಭಾವಿಗಳಿಗೆ ಒತ್ತಡ ಹಾಕಿದ್ದರು. ಇದನ್ನೂ ಓದಿ: VIDEO: ನೀರಿನೊಳಗೆ ಕುಳಿತ ಯುವಕನ ಕೈಯ್ಯಲ್ಲಿ ರೂಬಿಕ್​​ ಕ್ಯೂಬ್ಸ್​; ಆತನ ಹೆಸರು ಈಗ ಗಿನ್ನೀಸ್​ ದಾಖಲೆಯಲ್ಲಿ ಇನ್ನಷ್ಟು ಆಸ್ತಿ-ಪಾಸ್ತಿ?: ಸದ್ಯ ದಾಳಿ ಮುಂದುವರಿದಿದ್ದು, ವಶಪಡಿಸಿಕೊಂಡ ವಸ್ತುಗಳ ಬಗ್ಗೆ ಇಬ್ಬರಿಂದಲೂ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಇಬ್ಬರೂ ರಾಜ್ಯದ ವಿವಿಧೆಡೆ ಇನ್ನಷ್ಟು ಆಸ್ತಿ ಹೊಂದಿರುವ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ಸಂಶಯ ಉಂಟಾಗಿದೆ. ಕೋಟ್ಯಂತರ ರೂ. ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆ ಪರಿಶೀಲನೆ ನಡೆಸಿದ ಬಳಿಕ ಎಷ್ಟು ಪ್ರಮಾಣದಲ್ಲಿ ಅಧಿಕ ಆಸ್ತಿ ಹೊಂದಿದ್ದಾರೆ ಎಂಬುದು ನಿಖರವಾಗಿ ತಿಳಿದು ಬರಲಿದೆ. ದಾಳಿ ಮುಕ್ತಾಯವಾದ ಬಳಿಕ ಇಬ್ಬರನ್ನೂ ವಿಚಾರಣೆ ನಡೆಸಿ, ಅಕ್ರಮ ಆಸ್ತಿಗೆ ಸಂಬಂಧಿಸಿದ ದಾಖಲೆ ಒದಗಿಸುವಂತೆ ಸೂಚಿಸಲು ಎಸಿಬಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

7 ಕಡೆ ಜಮೀನು

ಮೈಸೂರಿನ ಕುವೆಂಪುನಗರದಲ್ಲಿ ನಾಗರಾಜ್ ಹೊಂದಿರುವ ವಾಸದ ಮನೆ, ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರು ಬಿಬಿಎಂಪಿ ಕಚೇರಿ, ಇವರ ಸಹೋದರ ವಾಸವಾಗಿರುವ ಮಾಗಡಿ ಪಟ್ಟಣದಲ್ಲಿರುವ ವಾಸದ ಮನೆ, ಮೈಸೂರಿನಲ್ಲಿ ಇವರ ಬಾಮೈದುನ ವಾಸವಾಗಿರುವ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. 1.4 ಕೆ.ಜಿ. ಚಿನ್ನಾಭರಣ, 9 ಲಕ್ಷ ರೂ., ಕೆಜಿಗಟ್ಟಲೆ ಬೆಳ್ಳಿಯ ವಸ್ತು, ಕೆಲ ವಾಹನಗಳು, ನಿವೇಶನ ಸೇರಿ ರಾಜ್ಯದ 7 ಕಡೆಗಳಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ-ಪಾಸ್ತಿ ಹೊಂದಿರುವುದಕ್ಕೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಲಾಗಿದೆ. ನಾಗರಾಜ್ ಕೆಲ ಸಮಯ ದಿಂದ ಅಭಿವೃದ್ಧಿ ಅಧಿಕಾರಿಯಾಗಿದ್ದು, ಅಧಿಕಾರ ದುರ್ಬಳಕೆ ಮಾಡಿಕೊಂಡು ಆದಾಯಕ್ಕಿಂತ 1:10ಕ್ಕೂ ಅಧಿಕ ಆಸ್ತಿ-ಪಾಸ್ತಿ ಹೊಂದಿರುವುದು ಕಂಡು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net