

ಬೆಂಗಳೂರು: ಭಾರತದಲ್ಲಿ ಕರೊನಾ ನಿಮೂಲನೆ ಮಾಡಲೇಬೇಕೆಂದು ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ರಾಜ್ಯಗಳಿಗೆ 2 ಗುರಿ ನಿಗದಿಪಡಿಸಿದ್ದಾರೆ. ಪಾಸಿಟಿವ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವ 10 ರಾಜ್ಯಗಳಲ್ಲಿ ಕರೊನಾವನ್ನು ಸಮರ್ಥವಾಗಿ ಎದುರಿಸಿದರೆ ದೇಶವೇ ಈ ಹೋರಾಟದಲ್ಲಿ ಗೆದ್ದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೋಂಕಿತರು ಪತ್ತೆಯಾದ 72 ಗಂಟೆಯೊಳಗೆ ಸಂರ್ಪತರನ್ನು ಪತ್ತೆ ಹಚ್ಚುವ, ಮರಣ ಪ್ರಮಾಣವನ್ನು ಶೇ.1ಕ್ಕಿಂತ ಕಡಿಮೆ ಮಾಡುವ ಹೊಣೆಗಾರಿಕೆಯನ್ನು ಆಯಾ ರಾಜ್ಯಗಳಿಗೆ ವಹಿಸಿದ್ದಾರೆ. ಹೆಚ್ಚು ಕರೊನಾ ಪ್ರಕರಣಗಳಿರುವ ಕರ್ನಾಟಕ ಸೇರಿ 10 ರಾಜ್ಯಗಳೊಂದಿಗೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ಮೋದಿ, ಆತ್ಮಸ್ಥೈರ್ಯವನ್ನೂ ತುಂಬಿ ದರು. ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಹಾಗೂ ಗುಣಮುಖ ಆದವರ ಸಂಖ್ಯೆ ಹೆಚ್ಚುತ್ತಿರುವುದು ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ, ಜನರಲ್ಲಿ ಭೀತಿಯೂ ಕಡಿಮೆ ಮಾಡಿದೆ ಎಂದರು. ಮರಣ ಪ್ರಮಾಣವನ್ನು ಶೇ.1 ಒಂದಕ್ಕಿಂತ ಕಡಿಮೆ ಮಾಡಲು ನಾವು ಶ್ರಮಿಸಬೇಕಿದೆ. ದೇಶದ ಒಟ್ಟು ಪ್ರಕರಣಗಳಲ್ಲಿ 10 ರಾಜ್ಯಗಳಲ್ಲೇ ಶೇ. 80ಕ್ಕೂ ಹೆಚ್ಚು ಕೇಸ್ಗಳಿವೆ. ಅಲ್ಲೆಲ್ಲ ಸೋಂಕು ಪರೀಕ್ಷೆ ವ್ಯವಸ್ಥೆಯನ್ನು ಉತ್ತಮ ಪಡಿಸುವ ಅಗತ್ಯವಿದೆ. 72 ಗಂಟೆಯಲ್ಲಿ ಸೋಂಕಿತರನ್ನು, ಅವರ ಸಂರ್ಪತರನ್ನು ಪತ್ತೆ ಮಾಡುವ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಹಾಜರಿದ್ದರು. ಇದನ್ನೂ ಓದಿ: ಕೈಮೀರಿದ ಪರಿಸ್ಥಿತಿ, 3 ಪೊಲೀಸ್ ಜೀಪ್ಗಳಿಗೆ ಬೆಂಕಿ; ಗಲಾಟೆ ಮಾಡದಂತೆ ಮುಸ್ಲಿಮರಲ್ಲಿ ಮನವಿ ಮಾಡಿದ ಶಾಸಕ