ಮಾಜಿ ಸಿಎಂ ಬಿಎಸ್​ವೈ ಟೀಮ್‌ನ ಹತ್ತು ಜನರು ಹುದ್ದೆಯಿಂದ ಬಿಡುಗಡೆ

bsy
Published on

ಬೆಂಗಳೂರು : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆಯ ಹಿನ್ನೆಲೆಯಲ್ಲಿ, ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಗಣ್ಯರನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರರಾಗಿದ್ದ ಪ್ರೊ.ಎಂ.ಆರ್.ದೊರೆಸ್ವಾಮಿ, ಸರ್ಕಾರದ ವಿಶೇಷ ಪ್ರತಿನಿಧಿಯಾಗಿದ್ದ ಶಂಕರಗೌಡ ಈರನಗೌಡ ಪಾಟೀಲ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿದ್ದ ಎಂ.ಪಿ.ರೇಣುಕಾಚಾರ್ಯ, ಡಿ.ಎನ್.ದೇವರಾಜ್ ಮತ್ತು ಎಸ್.ಆರ್.ಸಂತೋಷ್, ಕಾನೂನು ಸಲಹೆಗಾರ ಮೋಹನ್ ಲಿಂಬಿಕಾಯಿ, ಮಾಧ್ಯಮ ಸಲಹೆಗಾರ ಎಸ್.ಭೃಂಗೀಶ್, ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ, ಮಾಧ್ಯಮ ಸಂಯೋಜಕ ಸನೀಲ್ ಬಿ.ಎಸ್. ಮತ್ತು ನೀತಿ ನಿರೂಪಣೆ ಮತ್ತು ಕಾರ್ಯತಂತ್ರ ಸಲಹೆಗಾರರಾಗಿದ್ದ ಪ್ರಶಾಂತ್​ ಪ್ರಕಾಶ್ - ಇವರುಗಳನ್ನು ಆಯಾಯ ಹುದ್ದೆಗಳಿಂದ ಬಿಡುಗಡೆಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net