ರಾಜ್ಯದಲ್ಲಿ 10 ಹೊಸ ಸೋಂಕಿತರು, 191ಕ್ಕೇರಿತು ಸಂಖ್ಯೆ; ಆರು ಮಂದಿ ಸಾವು, 28 ಮಂದಿ ಆಸ್ಪತ್ರೆಯಿಂದ ಡಿಸ್​​ಚಾರ್ಜ್​

Corona
Published on

ಬೆಂಗಳೂರು: ಬುಧವಾರದ (ಏ.8) ಸಂಜೆ 5 ಗಂಟೆಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 10 ಹೊಸ ಕರೊನಾ ಸೋಂಕು ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಸಂಖ್ಯೆ 191ಕ್ಕೆ ಏರಿದೆ. ಇಂದು ಬೆಳಗ್ಗೆ ಮೃತಪಟ್ಟ ಗದಗ ಜಿಲ್ಲೆಯ ವೃದ್ಧೆ ಸೇರಿದಂತೆ ಸಾವಿನ ಸಂಖ್ಯೆ ಆರಕ್ಕೆ ಏರಿದೆ. 28 ಮಂದಿಯನ್ನು ವಿವಿಧ ಅಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.

ಬಾಗಲಕೋಟೆಯ ಮೂವರು, ಮೈಸೂರು ಹಾಗೂ ಬೆಂಗಳೂರಿನ ತಲಾ ಇಬ್ಬರು, ಬೆಳಗಾವಿ, ಮಂಡ್ಯ ಹಾಗೂ ಚಿಕ್ಕಬಳ್ಳಾಪುರದ ತಲಾ ಒಬ್ಬರಲ್ಲಿ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಹೊಸದಾಗಿ ಸೋಂಕು ಪತ್ತೆಯಾಗಿದೆ.

ಕರೊನಾ ಸೋಂಕು ತಡೆಗಟ್ಟಲು ಮಸೀದಿಯಲ್ಲಿ ಯಾವುದೇ ಸಭೆ, ಪ್ರಾರ್ಥನೆ ನಡೆಸದಂತೆ ಹಾಗೂ ಮೃತ ವ್ಯಕ್ತಿಗಳನ್ನು ದಫನ್‌ ಮಾಡಲು ಅನುಮತಿ ನೀಡದಂತೆ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯು ರಾಜ್ಯದ ಎಲ್ಲ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದೆ. ನಾಳೆ (ಏ.9)ರಂದು ನಡೆಸಲು ಉದ್ದೇಶಿಸಲಾಗಿದ್ದ ಶಾಬ್‌-ಎ-ಬರಾತ್‌ ಸಾರ್ವಜನಿಕರ ಭೇಟಿಯನ್ನು ರದ್ದುಗೊಳಿಸಲಾಗಿದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net