

ಕೊಲ್ಕತಾ : ರಾಜ್ಯದ ವಿಧಾನಸಭಾ ಚುನಾವಣೆಗೆ ಮುನ್ನ ಮತ್ತೆ ಹತ್ತು ಜನ ತೃಣಮೂಲ ಕಾಂಗ್ರೆಸ್(ಟಿಎಂಸಿ) ಮುಖಂಡರು ಮತ್ತು ಬೆಂಬಲಿಗರು ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದ್ದಾರೆ. ಕಳೆದ ವಾರ ಟಿಎಂಸಿಯ ಐದು ಶಾಸಕರು ಬಿಜೆಪಿ ಸೇರಿದ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದೆ.
ಇಂದು (ಮಾರ್ಚ್ 15) ಕೇಸರಿ ಪಕ್ಷಕ್ಕೆ ಸೇರಿದ ಟಿಎಂಸಿ ನಾಯಕರೆಂದರೆ - ಹಲ್ಡಿಯಾ ಪುರಸಭೆ ಮಾಜಿ ಅಧ್ಯಕ್ಷ ಶ್ಯಾಮಲ್ ಕುಮಾರ್ ಅದಾ, ಹಲ್ಡಿಯಾ ಟ್ರೇಡ್ ಯೂನಿಯನ್ ಕಾರ್ಯದರ್ಶಿ ಪ್ರದೀಪ್ ಚಕ್ರವರ್ತಿ, ಜಿಲ್ಲಾ ಪರಿಷತ್ ಕಾರ್ಯಕಾರಿ ಅಧ್ಯಕ್ಷ ಅನಿಂದ್ಯಮೊಯ್ ಅಧಿಕಾರಿ, ಬ್ಲಾಕ್ ಅಧ್ಯಕ್ಷ ಮಾಜಿ ಕೌನ್ಸಿಲರ್ ಪಾರ್ಥ ಬೋಸ್ ಮತ್ತು ಕೌನ್ಸಿಲರ್ಗಳಾದ ಸ್ವಾಪನ್ ದಾಸ್, ಸುಪ್ರಿಯೋ ಮೈಟಿ, ಇವರಲ್ಲದೆ ಟಿಎಂಸಿ ಬೆಂಬಲಿಗರಾಗಿದ್ದ ಕೊಂಕನ್ ಭುನಿಯಾ, ರವೀಂದ್ರನಾಥ್ ಅದಾಕ್, ಮನಸ್ ಭೂನಿಯಾ ಮತ್ತು ಸೌಮೆನ್ ಬೇರಾ ಎಂಬುವರೂ ಬಿಜೆಪಿ ಸೇರಿದ್ದಾರೆ. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ