Plane Crash : ಖಾಸಗಿ ವಿಮಾನ ಪತನ – 10 ಮಂದಿ ಸಾವು!

Plane Crash
Published on

Plane Crash : ಖಾಸಗಿ ವಿಮಾನವೊಂದು  ಪತನಗೊಂಡು  10 ಮಂದಿ ಸಾವನ್ನಪ್ಪಿದ್ದಾರೆ. ನೆಲಕ್ಕೆ ಬೀಳುವ ವೇಳೆ ಕಟ್ಟಡವೊಂದಕ್ಕೆ ವಿಮಾನ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಹಲವಾರು ಗಾಯಗೊಂಡಿದ್ದಾರೆ. ಈ ಘಟನೆ ಬ್ರೆಜಿಲ್​​ನಲ್ಲಿ ನಡೆದಿದೆ.

ಈ ವಿಮಾನವು ಬ್ರೆಜಿಲ್​ನ ಉದ್ಯಮಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದ್ದು, ಕಟ್ಟಡದಲ್ಲಿ ವಾಸಿಸುತ್ತಿದ್ದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬ್ರೆಜಿಲ್‌ನ ಸಿವಿಲ್ ಡಿಫೆನ್ಸ್ ಏಜೆನ್ಸಿಯ ಪ್ರಕಾರ, ಸಾವೊ ಪಾಲೊ ರಾಜ್ಯಕ್ಕೆ ತನ್ನ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಬ್ರೆಜಿಲ್‌ನ ಉದ್ಯಮಿ ಲೂಯಿಸ್ ಕ್ಲೌಡಿಯೊ ಗಲೇಜಿ ಅವರು ವಿಮಾನವನ್ನು ಪೈಲಟ್ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅವರು ತಮ್ಮ ಪತ್ನಿ, ಅವರ ಮೂವರು ಹೆಣ್ಣುಮಕ್ಕಳು, ಹಲವಾರು ಇತರ ಕುಟುಂಬ ಸದಸ್ಯರು ಮತ್ತು ಇನ್ನೊಬ್ಬ ಕಂಪನಿಯ ಉದ್ಯೋಗಿಯೊಂದಿಗೆ ಪ್ರಯಾಣಿಸುತ್ತಿದ್ದರು  ಎನ್ನಲಾಗಿದೆ. ವಿಮಾನವು ಮೊದಲು ಮನೆಯೊಂದರ ಚಿಮಣಿಗೆ (  chimney  ) ಡಿಕ್ಕಿಯಾಗಿ ನಂತರ ಕಟ್ಟಡದ ಎರಡನೇ ಮಹಡಿಗೆ ಅಪ್ಪಳಿಸಿತು  ಎನ್ನಲಾಗಿದೆ. ವಿಮಾನದಲ್ಲಿದ್ದವರು ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನ ಕಟ್ಟಡಕ್ಕೆ ಅಪ್ಪಳಿಸಿದ್ದಾಗ  ಹೆಚ್ಚಿನವರು ಅಪಘಾತದಿಂದ ಉಂಟಾದ ಬೆಂಕಿ, ಹೊಗೆಯಿಂದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇವರನೆಲ್ಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net