ರಾಷ್ಟ್ರೀಯ ಹೆದ್ದಾರಿಗಳಲ್ಲಿ 10 ಅಪಘಾತ ವಲಯ

accident (1)
Published on

ಅಪಘಾತ ವಲಯದ ಜತೆಗೆ ದೇಶಾದ್ಯಂತ ಹೆಚ್ಚು ಅಪಘಾತ ಸಂಭವಿಸುವ 5,583 ಕಪು$್ಪಚುಕ್ಕೆ (ಬ್ಲಾ$್ಯಕ್​ ಸ್ಪಾಟ್​) ರಸ್ತೆಯನ್ನು ಗುರುತಿಸಲಾಗಿದ್ದು, ಅದರಲ್ಲಿ ಕರ್ನಾಟಕದಲ್ಲಿಯೇ 551 ಕಪು$್ಪಚುಕ್ಕೆಗಳಿವೆ. ಹೀಗೆ ಗುರುತಿಸಲಾದ ಅಪಘಾತ ವಲಯಗಳು ಮತ್ತು ಕಪು$್ಪಚುಕ್ಕೆಗಳಲ್ಲಿ ಅಪಘಾತ ಕಡಿಮೆ ಮಾಡುವ ಸಲುವಾಗಿ ಸಾರಿಗೆ ಇಲಾಖೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಅದರಂತೆ ಅಪಘಾತ ವಲಯದ ಎಚ್ಚರಿಕೆ ಲಕ ಅಳವಡಿಕೆ, ರಸ್ತೆ ಉಬ್ಬುಗಳ ನಿರ್ಮಾಣ ಹೀಗೆ ಹಲವು ಕ್ರಮ ಅಳವಡಿಕೆಗೆ ಯೋಜನೆ ರೂಪಿಸಲಾಗುತ್ತಿದೆ.

ಅದರಂತೆ ರಾಮನಗರ ಜಿಲ್ಲೆ (ಎನ್​ಎಚ್​ 209) ವ್ಯಾಪ್ತಿಯಲ್ಲಿ ಅಪಘಾತದಿಂದ 37 ಸಾವು ಸಂಭವಿಸಿದೆ. ಅದೇ ರೀತಿ ಬಾಗಲಕೋಟೆಯ ದೇವಲಾಪುರ ಕ್ರಾಸ್​ (ಎನ್​ಎಚ್​ 50)ನಲ್ಲಿ 35 ಸಾವು, ರಾಮನಗರದ ಮಾಯಗಾನಹಳ್ಳಿ ಬಳಿ 30, ರಾಯಚೂರಿನ ಬೇಸ್​ ಪವರ್​ನಿಂದ ಎಂಪಿಸಿಎಲ್​ನಲ್ಲಿ 29, ಚಿತ್ರದುರ್ಗದ ಜೆಜಿ ಹಳ್ಳಿಯಲ್ಲಿ 28, ಮಂಡ್ಯದ ಪೂರ್ವ ಪಿಎಸ್​ ಕ್ರಾಸ್​ನಲ್ಲಿ 27, ರಾಯಚೂರಿನ ಸಂತೆಕೆಲ್ಲೂರ್​ನಲ್ಲಿ 24, ರಾಮನಗರದ ಕಗ್ಗಲಿಪುರ ಬಳಿಯ ಲಕ್ಷಿ$್ಮಪುರ, ಹುಳಿಮಾವುನಿಂದ ಸಿಂಗಸಂದ್ರ ಮಾರ್ಗ ಹಾಗೂ ಹೆಬ್ಬಗೋಡಿ ಬಸ್​ನಿಲ್ದಾಣದ ಬಳಿ ತಲಾ 23 ಜನರು ಅಪಘಾತದಿಂದ ಮೃತಪಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅಪಘಾತ ತಡೆಗೆ ಹಲವು ಕ್ರಮ ಕೈಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೇಂದ್ರ ಸಾರಿಗೆ ಇಲಾಖೆ, ಅದಕ್ಕಾಗಿ ಹೆಚ್ಚು ಅಪಘಾತವಾಗುವ ಮಾರ್ಗಗಳನ್ನು ಲೆಕ್ಕ ಮಾಡುತ್ತಿದೆ. ಅದರಂತೆ ರಾಜ್ಯದಲ್ಲಿ 10 ಹೆದ್ದಾರಿ ರಸ್ತೆಗಳನ್ನು ಗುರುತಿಸಲಾಗಿದೆ. 2016ರಿಂದ 2018ರವರೆಗಿನ ಅಪಘಾತ ಮತ್ತು ಅದರಿಂದಾದ ಸಾವಿನ ಲೆಕ್ಕವನ್ನು ಪಡೆದು ಅಪಘಾತ ವಲಯ ಎಂದು ಗುರುತಿಸಲಾಗಿದೆ.

ಬೆಂಗಳೂರು: ನಿತ್ಯ ಲಾಂತರ ವಾಹನ ಸಂಚರಿಸುವ ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಅತಿಹೆಚ್ಚು ಅಪಘಾತ ಸಂಭವಿಸುವ ರಾಜ್ಯ ವ್ಯಾಪ್ತಿಯ 10 ಅಪಘಾತ ವಲಯವನ್ನು ಕೇಂದ್ರ ಸಾರಿಗೆ ಇಲಾಖೆ ಗುರುತಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net