ಸಾಫ್ಟ್‌ವೇರ್ ಕಂಪನಿ ಮಾಲೀಕನ ಮನೆಯಲ್ಲಿ 1 ಕೆಜಿ ಚಿನ್ನ ಕನ್ನ

Crime Logo
Published on

ಬೆಂಗಳೂರು: ಸಾಫ್ಟ್‌ವೇರ್ ಕಂಪನಿ ಮಾಲೀಕನ ಮನೆ ಡೋರ್ ಲಾಕ್ ಒಡೆದಿರುವ ಕಳ್ಳರು ಬರೋಬ್ಬರಿ 55 ಲಕ್ಷ ರೂ. ಮೌಲ್ಯದ ಒಂದು ಕೆಜಿ ಚಿನ್ನವನ್ನು ಕಳವು ಮಾಡಿದ್ದಾರೆ.

ಹೆಲ್ತ್ ಲೇಔಟ್ ನಿವಾಸಿ ಕೆ.ಎ. ಪ್ರಸನ್ನ ಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಇವರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸಾಫ್ಟ್‌ವೇರ್ ಕಂಪನಿ ಮಾಲೀಕ ಪ್ರಸನ್ನ ಕುಮಾರ್, ಹೊಸ ಮನೆಯಲ್ಲಿ ಕಟ್ಟಿಸುತ್ತಿದ್ದರು. ಆ.19ರ ಮಧ್ಯಾಹ್ನ ಹೊಸ ಮನೆಯ ಬಳಿಗೆ ಹೋಗಿದ್ದರು. ಇತ್ತ ಪತ್ನಿ ಮತ್ತು ಮಕ್ಕಳು ಶಾಪಿಂಗ್ ಮಾಡಲು ಹೋಗಿದ್ದರು. ಇದರ ನಡುವೆ ಒಳ ನುಗ್ಗಿರುವ ಕಳ್ಳರು ವಿವಿಧ ಬಗೆಯ 1 ಕೆಜಿ 63 ಗ್ರಾಂ ಚಿನ್ನ ಮತ್ತು 5.5 ಲಕ್ಷ ರೂ. ನಗದನ್ನು ಕಳ್ಳರು ದೋಚಿದ್ದಾರೆ. ಒಟ್ಟಾರೆ 55 ಲಕ್ಷ ರೂ. ಅಂದಾಜು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನ್ನಪೂಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net