ಮಧ್ಯಾಹ್ನ ಊಟದ ನಂತ್ರ 1 ಲೋಟ ಲವಂಗ ಟೀ; ಸೇವನೆಯಿಂದ ಏನಾಗುತ್ತೆ ಗೊತ್ತಾ?

clovestea
Published on

ಬೆಂಗಳೂರು: ಲವಂಗವು ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಮಸಾಲೆಗಳಲ್ಲಿ ಒಂದಾಗಿದೆ. ಲವಂಗವು ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಲವಂಗವನ್ನು ಅಡುಗೆಗೆ ಮಾತ್ರವಲ್ಲದೆ ಟೀ ಮಾಡಿ ಸೇವನೆ ಮಾಡಿದ್ರೂ ಕೂಡಾ ಆರೋಗ್ಯಕ್ಕೆ ಅನೇಕ ಲಾಭಗಳಿವೆ...

ಲವಂಗದಲ್ಲಿ ವಿಟಮಿನ್-ಬಿ1, ವಿಟಮಿನ್-ಸಿ, ಬೀಟಾ-ಕ್ಯಾರೋಟಿನ್ ಮುಂತಾದ ಪ್ರಮುಖ ಪೋಷಕಾಂಶಗಳಿವೆ. ಅಲ್ಲದೆ ಇವುಗಳಲ್ಲಿರುವ ವಿಟಮಿನ್-ಕೆ, ಪ್ರೊಟೀನ್, ಕಾರ್ಬೋಹೈಡ್ರೇಟ್ ಗಳಂತಹ ಪೋಷಕಾಂಶಗಳು ದೇಹವನ್ನು ಸದೃಢವಾಗಿಡಲು ನೆರವಾಗುತ್ತವೆ.

ಲವಂಗ ಟೀ  ಮಾಡುವ ವಿಧಾನ: ಕುದಿಯುವ ನೀರಿಗೆ ಎರಡು ಲವಂಗ ಮತ್ತು ಒಂದು ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಕುದಿಸಿದರೆ ವಿವಿಧ ದೈಹಿಕ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಅಲ್ಲದೆ ಪ್ರತಿದಿನ ಊಟದ ನಂತರ ಈ ಚಹಾವನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮತ್ತು ರೋಗಗಳು ಗುಣವಾಗುತ್ತವೆ.

ಆಹಾರದಲ್ಲಿ ಸೇವಿಸಿದರೆ ಆಯಾಸ, ನಿದ್ರಾಹೀನತೆ ಮತ್ತು ದುರ್ವಾಸನೆ ಹೋಗಲಾಡಿಸಲು ಉಪಯುಕ್ತ.

ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ತಡೆಯಲು ಪ್ರತಿದಿನ 2 ಲವಂಗವನ್ನು ತೆಗೆದುಕೊಳ್ಳಬೇಕು ಎಂದು ಹೇಳಲಾಗುತ್ತದೆ. ಲವಂಗವು ಜೀರ್ಣಕ್ರಿಯೆಗೆ ಅತ್ಯುತ್ತಮ ಔಷಧವಾಗಿದೆ.

ನೆಗಡಿ ಮತ್ತು ಕೆಮ್ಮಿನಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಎರಡು ಲವಂಗವನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಲವಂಗದಲ್ಲಿ ಫೈಬರ್ ಸಮೃದ್ಧವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net