ದಾಖಲೆ ಇಲ್ಲದ 1.57 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

WhatsApp Image 2024-04-12 at 1.04.18 PM
Published on

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಚೆಕ್‌ ಪೋಸ್ಟ್​ನಲ್ಲಿ ಇ-ದಾಖಲೆ ಇಲ್ಲದೆ ಸಾಗಾಣಿಕೆ ಮಾಡುತ್ತಿದ್ದ 1,57,87,000 ರೂ. ಮೌಲ್ಯದ 2 ಕೆ.ಜಿ. 170 ಗ್ರಾಂ ಚಿನ್ನಾಭರಣಗಳನ್ನು ಎಫ್.ಎಸ್.ಟಿ ತಂಡದ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದಿದ್ದಾರೆ.

ಸತ್ತೇಗಾಲ ಚೆಕ್‌ ಪೋಸ್ಟ್​​ನಲ್ಲಿ ಬೆಳಗ್ಗೆ 10.45 ಗಂಟೆ ಸಮಯದಲ್ಲಿ ಬೆಂಗಳೂರಿನಿಂದ ಕೊಳ್ಳೆಗಾಲಕ್ಕೆ ಬರುತ್ತಿದ್ದ ಹುಂಡೈ ವೆನ್ಯೂ ಕಾರಿನಲ್ಲಿ ದಾಖಲೆಗಳಿಲ್ಲದೆ ಸಾಗಾಣಿಕೆ ಮಾಡುತ್ತಿದ್ದ ಕಾರ್ತಿಕ್ ಮತ್ತು ಚಿರಾಂತ್ ಎಂಬುವವರಿಂದ ಚಿನ್ನಾಭರಣಗಳನ್ನು ಎಫ್.ಎಸ್.ಟಿ ತಂಡದ ಅಧಿಕಾರಿ ಎಂ. ರವಿಶಂಕರ್ ಅವರು ಜಪ್ತಿ ಮಾಡಿದ್ದಾರೆ.

ಚಿನ್ನಾಭರಣ ಸಾಗಣೆ ಮಾಡುತ್ತಿದ್ದ ಬಗ್ಗೆ ವಿಚಾರಣೆ ಮಾಡಿದ ವೇಳೆ ಸ್ಪಷ್ಟ, ಸಮಂಜಸ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಚಿನ್ನವನ್ನು ವಶಕ್ಕೆ ಪಡೆದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net