ವಿದೇಶಿ ವಿಮಾನದ ಶೌಚಗೃಹದಲ್ಲಿ 1.33 ಕೆಜಿ ಚಿನ್ನ ಪತ್ತೆ

KIA (1)
Published on

ಬೆಂಗಳೂರು: ವಿದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿದ ವಿಮಾನದ ಶೌಚಗೃಹದಲ್ಲಿ 80 ಲಕ್ಷ ರೂ. ಮೌಲ್ಯದ ಚಿನ್ನದ ಪೇಸ್ಟ್ ಪತ್ತೆಯಾಗಿದೆ.

ಮಂಗಳವಾರ ಅಬುದಾಬಿಯಿಂದ ಕೆಐಎಗೆ ಬಂದಿಳಿದ ವಿಮಾನವನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಶೌಚಗೃಹ ತಪಾಸಣೆ ನಡೆಸಿದಾಗ ಕಪ್ಪುಬಣ್ಣದ ಚೀಲ ಪತ್ತೆಯಾಗಿದ್ದು, ಅದರಲ್ಲಿ ಚಿನ್ನದ ಪೇಸ್ಟ್ ಇರುವುದು ಬೆಳಕಿಗೆ ಬಂದಿದೆ.

ಅದರಲ್ಲಿ ಬರೋಬ್ಬರಿ 1 ಕೆಜಿ 331 ಗ್ರಾಂ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ 80.21 ಲಕ್ಷ ರೂ. ಆಗಿದ್ದು, ವಾರಸುದಾರರು ಪತ್ತೆಯಾಗಿಲ್ಲ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಕೆಐಎ ಕಸ್ಟಮ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net