ಮಹಿಳೆಗೆ 1.3 ಕೋಟಿ ರೂ. ವಂಚನೆ

Crime Logo
Published on

ಮೈಸೂರು: ಪೊಲೀಸ್ ಅಧಿಕಾರಿ ಹೆಸರಿನಲ್ಲಿ ಅಪರಿಚಿತ ವ್ಯಕ್ತಿ ನಗರದ ಉದ್ಯಮಿಯೊಬ್ಬರಿಗೆ ಆನ್‌ಲೈನ್ ಮೂಲಕ 1ಕೋಟಿ 39 ಲಕ್ಷ ರೂ. ವಂಚಿಸಿದ್ದಾರೆ.


ಉದ್ಯಮಿ ಪಾರ್ವತಿದೇವಿ ವಂಚನೆಗೆ ಒಳಗಾದವುರು. ಸೆ.18ರಂದು ಪಾರ್ವತಿ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ತನ್ನನ್ನು ದೆಹಲಿಯ ಪೊಲೀಸ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ. ಟೆಲಿಕಾಂ ರಿಜಿಸ್ಟರಿಂಗ್ ಅಥಾರಿಟಿ ಆಫ್ ಇಂಡಿಯಾದಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದ್ದು, ದೆಹಲಿಯಲ್ಲಿ ನಿಮ್ಮ ಹೆಸರಿನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದು ಕೋಟ್ಯಂತ ರೂ.ವ್ಯವಹಾರ ಮಾಡಲಾಗಿದೆ. ಆಧಾರ್ ಕಾರ್ಡನ್ನೂ ದುರುಪಯೋಗಪಡಿಸಿಕೊಂಡಿದ್ದಾರೆ ಎಂದಿದ್ದಾನೆ.

ನಂತರ ಮಹಿಳೆಗೆ ಫೋನ್ ಮೂಲಕ ಬಂಧನದ ವಾರಂಟ್ ಪ್ರತಿ, ಜಾಮೀನು ಭದ್ರತಾ ಬಾಂಡ್‌ನ ನಕಲಿ ಪ್ರತಿ ಕಳಿಸಿ, 2 ಕೋಟಿ ರೂ. ಸೆಕ್ಯೂರಿಟಿ ಬಾಂಡ್ ಇಡಬೇಕು. ಪ್ರಕರಣದ ತನಿಖೆ ಮುಗಿದ ಬಳಿಕ ಅ.10ರಂದು ಹಣ ಹಿಂದಿರುಗಿಸುತ್ತೇವೆ ಎಂದು ತಿಳಿಸಿದ್ದಾನೆ.ಅದನ್ನು ನಂಬಿದ ಮಹಿಳೆ ಆತ ತಿಳಿಸಿದ್ದ ಖಾತೆಗೆ ಹಂತ ಹಂತವಾಗಿ ಹಣ ಕಳುಹಿಸಿದ್ದಾರೆ. ಆದರೆ ಹಣವನ್ನು ಹಿಂದಿರುಗಿಸದೆ, ಸಂಪರ್ಕಕ್ಕೂ ಸಿಗದೆ ಇದ್ದಾಗ ಮಹಿಳೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net