ಮೃತಳ ಬ್ಯಾಂಕ್ ಖಾತೆಗೆ 1.13 ಲಕ್ಷ ಕೋಟಿ ರೂ. ಜಮೆ!

untitled-design-5-689246a79faa4
Published on

ನವದೆಹಲಿ: ಎರಡು ತಿಂಗಳ ಹಿಂದೆ ತಾಯಿಯನ್ನು ಕಳೆದು ಕೊಂಡ ದುಃಖದಲ್ಲಿದ್ದ ಗ್ರೇಟರ್ ನೋಯ್ಡಾದ ಡಂಕೌರ್ ಪ್ರದೇಶದ 19 ವರ್ಷದ ಯುವಕ ದೀಪಕ್ ಆಲಿಯಾಸ್ ದೀಪುಗೆ ಭಾನುವಾರ (ಆಗಸ್ಟ್ 3) ರಾತ್ರಿ ಆಘಾತವೊಂದು ಕಾದಿತ್ತು. ತಾಯಿ ಗಾಯತ್ರಿ ದೇವಿ ಹೊಂದಿದ್ದ ಕೊಟಕ್ ಮಹೀಂದ್ರ ಬ್ಯಾಂಕ್ ಖಾತೆ ನಿರ್ವಹಿಸುವುದನ್ನು ಆತ ಮುಂದುವರಿಸಿದ್ದು, 39 ಅಂಕಿಯ ಮೊತ್ತದ ಹಣ ಜಮಾ ಆಗಿರುವ ಬಗ್ಗೆ ಮೊಬೈಲ್​ಫೋನ್​ಗೆ ಬಂದ ಸಂದೇಶ ನೋಡಿ ಆಶ್ಚರ್ಯ ಚಕಿತನಾಗಿದ್ದ. ಆತನ ಅಮ್ಮನ ಖಾತೆಗೆ ಜಮೆಯಾದ ಹಣದ ಮೊತ್ತ ಬರೋಬ್ಬರಿ 1.13 ಲಕ್ಷ ಕೋಟಿ ರೂಪಾಯಿ ಆಗುತ್ತದೆ. 10,01,35,60,00,00,00,00,00,01,00,23,56,00,00,00,00,299 ರೂಪಾಯಿ ಜಮೆಯಾಗಿದ್ದನ್ನು ನೋಡಿ ನಂಬಲಾಗದ ದೀಪಕ್, ಸಂದೇಶವನ್ನು ಗೆಳೆಯರಿಗೆ ಕಳಿಸಿ ಅದನ್ನು ಲೆಕ್ಕ ಹಾಕಿ ಹೇಳುವಂತೆ ತಿಳಿಸಿದ್ದ.

ಸೋಮವಾರ ಬೆಳಗ್ಗೆಯೇ ಬ್ಯಾಂಕ್ ಖಾತೆಗೆ ತೆರಳಿ ವಿಚಾರಿಸಿದಾಗ ಅಸಹಜ ಮೊತ್ತದ ಹಣ ಕ್ರೆಡಿಟ್ ಆಗಿರುವುದನ್ನು ಅಧಿಕಾರಿಗಳು ದೃಢಪಡಿಸಿದರು. ಆದರೆ ಖಾತೆಯನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದರು. ಕೊಟಕ್ ಮಹೀಂದ್ರ ಬ್ಯಾಂಕ್ ಅಧಿಕಾರಿಗಳು ಈ ವಿಷಯವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net