ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಗಂಡನಿಂದ ಪಿಟ್ಸ್ ಬಂದಿರೋ ನಾಟಕ..!

Woman
Published on

ಬೆಂಗಳೂರು: ಮಕ್ಕಳಾಗುವುದಿಲ್ಲ ಎಂದು ಜ್ಯೋತಿಷಿ ನುಡಿದ ಮಾತನ್ನು ನಂಬಿ ಅತ್ತೆ ಮನೆಯವರು ನೀಡುತ್ತಿದ್ದ ಕಿರುಕುಳ ತಾಳಲಾರದೇ ನವವಿವಾಹಿತೆ ನೇಣಿಗೆ ಶರಣಾಗಿರುವ ಅಮಾನವೀಯ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಶ್ವಿನಿ(25) ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ. ಕಳೆದ ಫೆಬ್ರವರಿಯಂದು ಯುವರಾಜ್ ಎಂಬಾತನ‌ ಜತೆ ಅಶ್ವಿನಿಗೆ ಮದುವೆಯಾಗಿತ್ತು. ಮದುವೆಯ ಬಳಿಕ‌ ಅಶ್ವಿನಿ ಜಾತಕವನ್ನು ಜ್ಯೋತಿಷಿ ಬಳಿ ಅತ್ತೆಯ ಮನೆಯವರು ಕೇಳಿದ್ದರು. ಜಾತಕ ನೋಡಿದ ಜ್ಯೋತಿಷಿ ಅಶ್ವಿನಿಗೆ ಮಕ್ಕಳಾಗಲ್ಲ ಎಂದು ಹೇಳಿದ್ದ.

ಈ ವಿಚಾರವನ್ನು ತಿಳಿದು ಗಂಡನ ಮನೆಯವರು ಪ್ರತಿನಿತ್ಯ ಕಿರುಕುಳ ನೀಡಲು ಆರಂಭಿಸಿದರು ಎಂದು ಆರೋಪಿಸಲಾಗಿದೆ. ಕಾರು, ಚಿನ್ನ ಹಾಗೂ ನಗದು ನೀಡುವಂತೆ ಅಶ್ವಿನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರಂತೆ. ಪ್ರತಿ ದಿನದಂತೆ ನಿನ್ನೆಯೂ ಸಹ ದಂಪತಿ ನಡುವೆ ಜಗಳ ನಡೆದಿದ್ದು, ಇಂದು ಬೆಳಗ್ಗೆ ಅಶ್ವಿನಿ ಶವ ಶೌಚಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಶವವನ್ನು ಮರಣೋತ್ತರ ಪರೀಕ್ಷೆಗೆ ಅಂಬೆಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಂಡ ಯುವರಾಜ್ ಪಿಟ್ಸ್ ಬಂದಿರೋ ಹಾಗೆ ನಾಟಕವಾಡಿ ಆಸ್ಪತ್ರೆ ಸೇರಿರುವ ಆರೋಪ ಕೇಳಿಬಂದಿದ್ದು, ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net